March 29, 2023

Newsnap Kannada

The World at your finger tips!

bus , fire , mysore

A bus carrying more than 50 tourists caught fire near Chamundibetta ಚಾಮುಂಡಿಬೆಟ್ಟದ ಬಳಿ 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್‍ನಲ್ಲಿ ಬೆಂಕಿ

ಚಾಮುಂಡಿಬೆಟ್ಟದ ಬಳಿ 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್‍ನಲ್ಲಿ ಬೆಂಕಿ

Spread the love

ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅನಾಹುತವೊಂದು ತಪ್ಪಿದೆ ಚಾಮುಂಡಿಬೆಟ್ಟ ದ ಬಸ್‌ ನಿಲ್ದಾಣದ ಸಮೀಪ ಸುಮಾರು 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಚಾಲಕನ ಸಮಯಪ್ರಜ್ಞೆಯಿಂದ ಅವಘಡ ತಪ್ಪಿದೆ.

ಗುಜರಾತ್ ನಿಂದ ಬಸ್‍ನಲ್ಲಿ ಪ್ರವಾಸಿಗರು ಚಾಮುಂಡಿಬೆಟ್ಟಕ್ಕೆ ಬಂದಿದ್ದರು. ಆದರೆ ಬೆಟ್ಟದ ಸಮೀಪ ಇರುವ ಬಸ್ ನಿಲ್ದಾಣದಲ್ಲಿ ಡಿಸೇಲ್ ಲೀಕೇಜ್ ನಿಂದ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬಸ್ಸಿನ ಸೈಲೆನ್ಸರ್ ಪೈಪ್ ನಿಂದ ಇದ್ದಕ್ಕಿದ್ದ ಹಾಗೆ ಹೊಗೆ ಬರಲಾರಂಭಿಸಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ- ಈಶ್ವರಪ್ಪಗೆ ಮತ್ತೆ ಸಂಕಷ್ಟ

ಬಳಿಕ ಪೈಪ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಗಮನಿಸಿದ ಚಾಲಕ ಕೂಡಲೇ ಬೆಂಕಿಯ ಸಂಪರ್ಕದ ವಯರ್ ಗಳನ್ನು ಕಟ್ ಮಾಡಿದ್ದಾರೆ. ಇತ್ತ ಪ್ರವಾಸಿಗರನ್ನು ತಕ್ಷಣವೇ ಬಸ್ಸಿನಿಂದ ಕೆಳಗಿಳಿಸಿದ್ದಾರೆ. ಪರಿಣಾಮ ಪ್ರಯಾಣಿಕರು ದೊಡ್ಡ ಅವಘಡದಿಂದ ಪಾರಾಗಿದ್ದಾರೆ.

error: Content is protected !!