ಬೆಂಗಳೂರಿನಲ್ಲಿ ಡಿಸೇಲ್ ಬದಲು ವಾಹನಕ್ಕೆ ನೀರು ತುಂಬಿದ ಬಂಕ್ ಸಿಬ್ಬಂದಿ

Team Newsnap
1 Min Read

ಪೆಟ್ರೋಲ್​ ಬಂಕ್​ನಲ್ಲಿ ಡಿಸೇಲ್​ ಬರಲು ವಾಹನಕ್ಕೆ ನೀರು ತುಂಬಿದ ಘಟನೆ ಬೆಂಗಳೂರಿನ ​ಹೆಚ್.ಬಿ.ಆರ್ ಲೇಔಟ್​ನ ಹೆಚ್.ಪಿ.ಬಂಕ್​​ನಲ್ಲಿ ನಡೆದಿದೆ.

ಬಂಕ್​ ಸಿಬ್ಬಂದಿ ಡೀಸೆಲ್‌ ಬದಲು ನೀರು ತುಂಬಿ ಗ್ರಾಹಕರಿಗೆ ಯಾಮಾರಿಸುತ್ತಿದ್ದಾರೆ ಎಂಬ ಆರೋಪ ಕೇಳಿ‌ ಬಂದಿದೆ.

ಬಂಕ್ ಸಿಬ್ಬಂದಿ ಲಾರಿಗೆ ಡೀಸೆಲ್ ಬದಲು ನೀರು ಹಾಕಿ ಲಾರಿ ಚಾಲಕನಿಗೆ ಯಾಮಾರಿಸಿದ್ದರು. ಅನುಮಾನಗೊಂಡ ಲಾರಿ ಚಾಲಕ ಬಕೆಟ್​​ಗೆ ಡಿಸೇಲ್ ತುಂಬಿ ಪರೀಕ್ಷಿಸಿದ ಸಂದರ್ಭದಲ್ಲಿ ತಾನು ಯಾಮಾರಿರುವುದು ಗೊತ್ತಾಗಿದ್ದು, ಕೂಡಲೇ ಚಾಲಕ ಸಿಬ್ಬಂದಿಗೆ ವಂಚನೆ ಬಗ್ಗೆ ಪ್ರಶ್ನಿಸಿದ್ದಾರೆ.

ಆದ್ರೆ ಸಿಬ್ಬಂದಿ ಇದೆಲ್ಲಾ ಕಾಮನ್​ ಎಂದು ಉಡಾಫೆಯಾಗಿ ಉತ್ತರಿಸಿ, ಚಾಲಕನಿಗೆ ಧಮ್ಕಿ ಕೂಡ ಹಾಕಿದ್ದಾರಂತೆ.

ಗಾಡಿಗೆ ಹಾಕಿಸಿಕೊಂಡ ಡೀಸೆಲ್​ನಲ್ಲಿ ಶೇಕಡಾ 90.ರಷ್ಟು ನೀರಿದ್ರೆ, ಡೀಸೆಲ್​ ಸಿಗೋದು ಕೇವಲ 10% ಮಾತ್ರ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರೋ ವೇಳೆಯಲ್ಲಿ ಬಂಕ್ ನವರು ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಚಾಲಕ ಆರೋಪ ಮಾಡಿದ್ದಾರೆ.

Share This Article
Leave a comment