January 29, 2026

Newsnap Kannada

The World at your finger tips!

BSY,POCSO, crime

ಸ್ವಂತ ಬಲ, ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ತರುವುದೇ BSYಶಪಥ – ವಿಜಯೇಂದ್ರ

Spread the love

ಮುಂದಿನ ಸಾರ್ವತ್ರಿಕ ಚುನಾವಣೆ ಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಸ್ಪಷ್ಟ ಬಹುಮತದೊಂದಿಗೆ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಬೇಕು.ಇದು ಯಡಿಯೂರಪ್ಪನವರ ಶಪಥ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಮಂಗಳವಾರ ಹೇಳಿದರು

bjp

ಇದನ್ನು ಓದಿ –ಸಂಸದ ಪ್ರತಾಪ್ ಸಿಂಹ ಒಬ್ಬ ಅಯೋಗ್ಯ – ಎಚ್ ವಿಶ್ವನಾಥ್

ಮಂಡ್ಯ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ನಡೆದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾ ಸಭೆಯಲ್ಲಿ ಮಾತನಾಡಿದ ವಿಜಯೇಂದ್ರ ಯಡಿಯೂರಪ್ಪನವರ ಶಪಥ ಈಡೇರಲು ಮಂಡ್ಯ ಜಿಲ್ಲೆಯ ಜನರ ಸಹಕಾರ ಅತಿಮುಖ್ಯ ಜಿಲ್ಲೆಯ ಏಳಕ್ಕೆ ಏಳು ಕ್ಷೇತ್ರ ಗೆಲ್ಲುವಂತೆ ಆಗಬೇಕು. ಅದಕ್ಕೆ ಪೂರಕವಾಗಿ ಪದವೀಧರರ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಬೇಕು ಎಂದರು

ಯಡಿಯೂರಪ್ಪ ಅವರ ಜನ್ಮ ಭೂಮಿ, ಕರ್ಮ ಭೂಮಿ ಮಂಡ್ಯ.ನಾನು ಯಾವಾಗಲೂ ಮಂಡ್ಯಕ್ಕೆ ಬಂದಾಗ ಹೆಮ್ಮೆ ಆಗುತ್ತೆ. ಕಾಂಗ್ರೆಸ್-ಜೆಡಿಎಸ್ ಪಕ್ಷದ ಹಪಾಹಪಿಯಿಂದ ಮೈತ್ರಿ ಸರ್ಕಾರ ಬಂತು. ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾದ ಕಾರಣ ಬಿಜೆಪಿ ಅಧಿಕಾರಕ್ಕೆ ಬಂತು. ಅಂದು ನಾರಾಯಣ ಗೌಡರ ಸ್ಥಾನದಲ್ಲಿ ನಾನಿದ್ದರೂ ರಾಜೀನಾಮೆ ಕೊಡ್ತಿರಲಿಲ್ಲ.ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿಟ್ಟು ರಾಜೀನಾಮೆ ಕೊಟ್ಟು ಬಂದರು ಎಂದು ಹೇಳಿದರು

ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲ್ಲುವ ಭರವಸೆ ಯಾರಲ್ಲೂ ಇರಲಿಲ್ಲ. ಕೊನೆ ಕ್ಷಣದವರೆಗೂ ಹೋರಾಟ ಮಾಡಿದೆವು. ಜೆಡಿಎಸ್ ಭದ್ರಕೋಟೆಯಲ್ಲೂ ಕಮಲ ಅರಳಿಸಿದ್ದೇವೆ.ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದ್ರೆ ಯಶಸ್ಸು ಸಾಧ್ಯ ಅನ್ನೋದಕ್ಕೆ ಸಾಕ್ಷಿ.ಕೆ.ಆರ್.ಪೇಟೆ ಗೆದ್ದಿದ್ದು ಇಡೀ ನಾಡನ್ನೇ ಗೆದ್ದಷ್ಟು ಯಡಿಯೂರಪ್ಪರಿಗೆ ಖುಷಿ ತಂದಿತು ಎಂದರು

ಕೆ.ಆರ್.ಪೇಟೆ ವಿಜಯಯಾತ್ರೆ ಮಂಡ್ಯದ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿಯಬೇಕು.
ಒಗ್ಗಟ್ಟಿನಿಂದ ಕೆಲಸ ಮಾಡಿ ಅದರಲ್ಲಿ ಯಶಸ್ವಿಯಾಗೋಣ. ಯಡಿಯೂರಪ್ಪ 4 ಬಾರಿ ಸಿಎಂ ಆದರು, ರೈತರಿಗೆ ಪ್ರತ್ಯೇಕ ಬಜೆಟ್ ಮಂಡಿಸಿ, ಸಾಲಮನ್ನಾ ಮಾಡಿದರು. ನಾಡಿನ ಎಲ್ಲಾ ವರ್ಗದವರ ಧನಿಯಾಗಿ ಕೆಲಸ ಮಾಡಿದ್ರು.
ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ, ಕಾಂಗ್ರೆಸ್ಸಿಗರ ರೀತಿ ಬೊಬ್ಬೆ ಒಡೆಯಲಿಲ್ಲ.


ಒಂದು ವರ್ಗಕ್ಕೆ ಸೀಮಿತವಾಗಿ, ಕೇಂದ್ರದ ಯೋಜನೆಗೆ ತಮ್ಮ ಫೋಟೋ ಹಾಕೊಂಡ್ರು ಕಾಂಗ್ರೆಸ್ಸಿಗರು. ಮೋದಿಯವರು ಪ್ರಧಾನಿಯಾದ ನಂತರ ಒಂದೂ ದಿನವೂ ವಿಶ್ರಾಂತಿ ಪಡೆಯಲಿಲ್ಲ ಮೋದಿ.
ಅಮಿತ್ ಶಾ ಮೂಲಕ ಉಕ್ಕಿನ ಮನುಷ್ಯನನ್ನು ನೋಡ್ತಿದ್ದೇವೆ ಎಂದು ಹೇಳಿದರು.

error: Content is protected !!