January 10, 2025

Newsnap Kannada

The World at your finger tips!

yadi silver

ಪ್ರಥಮ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದ ಮಾಜಿ ಸಿಎಂ ಬಿಎಸ್‌ವೈ

Spread the love

ಪ್ರಥಮ ಬಾರಿಗೆ ರಾಜ್ಯ ವಿಧಾನಸಭೆಯಲ್ಲಿ ನೀಡಲಾಗುತ್ತಿರುವ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಸದನದ ಹಿರಿಯ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರದಾನ ಮಾಡಲಾಯಿತು.


ಲೋಕಸಭೆ ಮಾದರಿಯಲ್ಲಿ ಮೊದಲಬಾರಿಗೆ ಅತ್ಯುತ್ತಮ ಪ್ರಶಸ್ತಿ ಘೋಷಿಸಲಾಗಿದ್ದು, ಇಂದು ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಭಾಗವಹಿಸಿದ್ದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಯಡಿಯೂರಪ್ಪ ಅವರಿಗೆ ಬೆಳ್ಳಿಯ ಪ್ರಶಸ್ತಿ ಫಲಕ ಪ್ರದಾನ ಮಾಡಿದರು.


ಇದೇ ವೇಳೆ ಮಾತನಾಡಿದ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ವರ್ಷದಿಂದ ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡಲಾಗುತ್ತಿದೆ. ಇಂತಹ ಪ್ರಶಸ್ತಿ ಅನೇಕ ರಾಜ್ಯಗಳಲ್ಲಿದೆ. ಇದಕ್ಕೆ ಸಮಿತಿಯೂ ಇದೆ. ತಾವು ಅಧ್ಯಕ್ಷರಾಗಿದ್ದು, ಸಿದ್ದರಾಮಯ್ಯ, ಮಾಧುಸ್ವಾಮಿ, ಆರ್.ವಿ.ದೇಶಪಾಂಡೆ ಸದಸ್ಯರು ಎಂದು ವಿವರಿಸಿದರು.


ಹಲವು ಜವಾಬ್ದಾರಿಗಳನ್ನು ಹೊತ್ತವರು ಯಡಿಯೂರಪ್ಪ, ಉತ್ತಮ ಆಡಳಿತ ನೀಡಿದವರು. ರೈತ ನಾಯಕ, ಅತ್ಯುತ್ತಮ ಸಂಸದೀಯಪಟು ಎಂದು ಶ್ಲಾಘಿಸಿದರು. ಈ ವರ್ಷದಿಂದ ಹೊಸ ಸಂಪ್ರದಾಯ ಆರಂಭವಾಗಿದೆ. ಪ್ರತಿ ವರ್ಷ ಉತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸ್ಪೀಕರ್ ಹೇಳಿದರು.

ವಿಧಾನಪರಿಷತ್ ಸಭಾಪತಿ ಬಸವರಾಜಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರುಗಳು, ಬಿಜೆಪಿ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಸದಸ್ಯರು ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರು. ಜೆಡಿಎಸ್ ಸದಸ್ಯರು ಪಾಲ್ಗೊಂಡಿದ್ದರು.

Copyright © All rights reserved Newsnap | Newsever by AF themes.
error: Content is protected !!