December 22, 2024

Newsnap Kannada

The World at your finger tips!

women , murder , BJP

Brutal murder of young woman: Son of former BJP minister arrested ಸುಂದರ ಯುವತಿಯ ಬರ್ಬರ ಕೊಲೆ : ಬಿಜೆಪಿಯ ಮಾಜಿ ಸಚಿವರ ಪುತ್ರನ ಬಂಧನ

ಸುಂದರ ಯುವತಿಯ ಬರ್ಬರ ಕೊಲೆ : ಬಿಜೆಪಿಯ ಮಾಜಿ ಸಚಿವರ ಪುತ್ರನ ಬಂಧನ

Spread the love

ಉತ್ತರಾಖಂಡ್​​ನಲ್ಲಿ ಕಳೆದ ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸುಂದರ ಯುವತಿ, ಈಗ ಶವವಾಗಿ ಪತ್ತೆಯಾಗಿದ್ದಾಳೆ. ಈಕೆಯ ಸಾವಿಗೆ ಇನ್ನೂ ನಿಖರ ಕಾರಣ ಮಾತ್ರ ತಿಳಿದಿಲ್ಲ.

ಅಂಕಿತಾ ಭಂಡಾರಿ ಪೌರಿ ಗರ್ವಾಲ್​ ಎಂಬ ಈ ಯುವತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ . ಬಂಧಿತರ ಪೈಕಿ ಓರ್ವ ಬಿಜೆಪಿ ನಾಯಕ, ಮಾಜಿ ಸಚಿವರ ಪುತ್ರ ಪುಲ್ಕಿತ್ ಆರ್ಯನೂ ಸೇರಿದ್ದಾನೆ.ಇದನ್ನು ಓದಿ –PFI ಮುಖಂಡನ ಮನೆಯಲ್ಲಿ ಸಾವರ್ಕರ್‌ ಬುಕ್ ಪತ್ತೆ: ಶಿವಮೊಗ್ಗದಲ್ಲಿ 19 ಲಕ್ಷ ರು ಪತ್ತೆ

ಉತ್ತರಾಖಂಡ್​​ನ ಭೋಜ್​ಪುರ್​​ ಬಳಿಯ ರೆಸಾರ್ಟ್​ವೊಂದರಲ್ಲಿ ಅಂಕಿತಾ ಭಂಡಾರಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡ್ತಿದ್ದಳು. ಸೆಪ್ಟೆಂಬರ್​​ 19 ರಂದು ಅಂಕಿತಾ ಭಂಡಾರಿ (ಸೋಮವಾರದಿಂದ) ದಿಢೀರ್​​ ನಾಪತ್ತೆಯಾಗಿದ್ದಳು ನಂತರ ಅಂಕಿತಾ ಭಂಡಾರಿ ಉತ್ತರಾಖಂಡ್​​ನ ಪೌರಿ ಗರ್ವಾಲ್​ ಬಳಿ ಶವವಾಗಿ ಪತ್ತೆಗಿದ್ದಾಳೆ.

ಯುವತಿಯನ್ನು ಕೊಂದು ಆಕೆಯ ಶವವನ್ನು ಕಾಲುವೆಗೆ ಎಸಗಿರುವುದಾಗಿ ಆರೋಪಿಗಳೇ ತಪ್ಪೊಪ್ಪಿಕೊಂಡಿದ್ದಾರೆ.

4 ದಿನಗಳ ನ್ಯಾಯಾಂಗ ಬಂಧನ:

ಬಿಜೆಪಿ ನಾಯಕ, ಮಾಜಿ ಸಚಿವ ವಿನೋದ್ ಆರ್ಯರ ಪುತ್ರ ಪುಲ್ಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್, ಹಾಗೂ ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾರನ್ನು ಪೊಲೀಸರು ಬಂಧಿಸಿದ್ದಾರೆ.

ಮೂವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!