June 1, 2023

Newsnap Kannada

The World at your finger tips!

students , manglore , chennai

Three female students who escaped from Mangalore hostel were found in Chennai ಮಂಗಳೂರು ಹಾಸ್ಟೆಲ್‌ನ ನಿಂದ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

ಮಂಗಳೂರು ಹಾಸ್ಟೆಲ್‌ನ ನಿಂದ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

Spread the love

ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನೈ ನಲ್ಲಿ ಪತ್ತೆಯಾಗಿದ್ದಾರೆ.

ಚೆನ್ನೈನಲ್ಲಿ ಪತ್ತೆಯಾದ ಮೂವರು ವಿದ್ಯಾರ್ಥಿನಿಯರನ್ನು ಕುಡ್ಲ ಪೊಲೀಸರು ಮಂಗಳೂರಿಗೆ ಕರೆತಂದಿದ್ದಾರೆ.ಸುಂದರ ಯುವತಿಯ ಬರ್ಬರ ಕೊಲೆ : ಬಿಜೆಪಿಯ ಮಾಜಿ ಸಚಿವರ ಪುತ್ರನ ಬಂಧನ

ವಿದ್ಯಾರ್ಥಿನಿಯರ ತಂಡ ಮಂಗಳೂರಿನಿಂದ ರೈಲಿನ ಮೂಲಕ ಕೊಯಂಬತ್ತೂರು ತೆರಳಿದ್ದರು.

ಕೊಯಂಬತ್ತೂರಿನಿಂದ ಬಸ್ ಮೂಲಕ ಪಾಂಡಿಚೇರಿಗೆ ಪ್ರಯಾಣ ಬೆಳಸಿ, ಮತ್ತೆ ಪಾಂಡಿಚೇರಿಯಿಂದ ವಾಪಸ್ ಚೆನೈಗೆ ಬಂದಿದ್ದರು. ದೂರದ ಊರು ಸುತ್ತಾಡಿ ಮರಳಿ ಮನೆ ಸೇರಲು ವಿದ್ಯಾರ್ಥಿನಿಯರು ನಿರ್ಧರಿಸಿದ್ದರು ಎಂಬ ವಿಷಯ ಇದೀಗ ಬಯಲಾಗಿದೆ.

ಸೆ. 21ರಂದು ನಗರದ ಖಾಸಗಿ ಕಾಲೇಜೊಂದರ ಹಾಸ್ಟೆಲ್‍ನಲ್ಲಿದ್ದ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ಕಿಟಕಿಯ ರಾಡ್ ಮುರಿದು ಪರಾರಿಯಾಗಿದ್ದರು.

ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರಾದ ಯಶಸ್ವಿನಿ, ದಕ್ಷತಾ, ಸಿಂಚನಾ ಪಿಯುಸಿ ವಿದ್ಯಾರ್ಥಿಗಳಾಗಿದ್ದು, ಹಾಸ್ಟೆಲ್‍ನಲ್ಲಿ ಇದ್ದು ವ್ಯಾಸಂಗ ಮಾಡುತ್ತಿದ್ದರು.

ನಾವು ಹೋಗುತ್ತಿದ್ದೇವೆ, ಕ್ಷಮಿಸಿ ಎಂದು ಪತ್ರ ಬರೆದಿಟ್ಟು ಹಾಸ್ಟೆಲ್‍ನ ಕಿಟಕಿಯ ರಾಡ್ ಮುರಿದು ಪರಾರಿಯಾಗಿದ್ದರು.

error: Content is protected !!