December 22, 2024

Newsnap Kannada

The World at your finger tips!

Map karnataka flag

ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)

Spread the love

ಪುರಾಣ ಕಾಲದಲ್ಲಿ ರಾಮನಗರಕ್ಕೆ ರಾಮಗಿರಿ ಶಿವಗಿರಿ
ಟಿಪ್ಪು ಸುಲ್ತಾನನ ಆಡಳಿತಾವಧಿಯಲ್ಲಿ ಶಂಸೆರಾಬಾದ್
ಬ್ರಿಟಿಷರ ಕಾಲದ ಸರ್ ಬ್ಯಾರಿ ಕ್ಲೋಸ್ ನ ಕ್ಲೋಸೆಪ್ಟ್
ಕೆಂಗಲ್ ಹನುಮಂತಯ್ಯ ರಾಮನಗರ ಹೆಸರಿಸಿದರು

ಗಂಗ ರಾಷ್ಟ್ರಕೂಟರು ಹೊಯ್ಸಳರು ಚೋಳರು
ಟಿಪ್ಪು ಸುಲ್ತಾನ್ ಮತ್ತು ಕೆಂಪೇಗೌಡರ ವಂಶಸ್ಥರು
ಮೈಸೂರು ಅರಸರು ಹಾಗೂ ಬ್ರಿಟಿಷರು ಆಳಿದರು
ಈ ಜಿಲ್ಲೆಗೆ ಸಿಲ್ಕ್ ಸಿಟಿ,ರೇಷ್ಮೆ ನಗರಿ ಎಂಬ ಹೆಸರು

ಚನ್ನಪಟ್ಟಣ ಮಾಗಡಿ ಮತ್ತು ರಾಮನಗರ
ಹಾರೋಹಳ್ಳಿ ಕುಣಿಗಲ್ ಹಾಗೂ ಕನಕಪುರ
ಎಂಬ ಆರು ತಾಲ್ಲೂಕುಗಳ ಜಿಲ್ಲೆಯು ಇದು
ಸಪ್ತ ಗಿರಿಗಳ ಬೆಟ್ಟ ಎಂದೂ ಹೆಸರಿಹುದು

ರಾಮನಗರದ ರಾಮದೇವರ ಬೆಟ್ಟ ಜಲಸಿದ್ದೇಶ್ವರ
ಸೋಮಗಿರಿ ಕೃಷ್ಣಗಿರಿ ಯತಿರಾಜಗಿರಿ ರೇವಣಸಿದ್ದೇಶ್ವರ
ಸಿಡಿಲಕಲ್ಲು ಬೆಟ್ಟ ಶಿವರಾಮಗಿರಿ ಎಂಬೀ ೭ಬೆಟ್ಟಗಳು
ರಾಮನಗರ ಬೆಟ್ಟದಲ್ಲಿ ರಣಹದ್ದುಗಳ ವನ್ಯಧಾಮವಿದೆ

ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ರಾಮನಗರ
ವಿಶ್ವವಿಖ್ಯಾತ ಮೈಸೂರು ರೇಷ್ಮೆ ಸೀರೆಯ ನೇಯ್ಗೆಗೆ
ಈ ರಾಮನಗರದ ರೇಷ್ಮೆಯನ್ನೇ ಬಳಸುವ ಹೆಮ್ಮೆ ಇದೆ
ಸುಪ್ರಸಿದ್ಧ ಚಲನಚಿತ್ರ ಶೋಲೆ ಚಿತ್ರೀಕರಣ ಇಲ್ಲಾಗಿದೆ

ಈ ಜಿಲ್ಲೆಯ ನದಿಗಳು ಕಣ್ವ ಶಿಂಷಾ ವೃಷಭಾವತಿ
ಕಾವೇರಿ ನದಿ ಅರ್ಕಾವತಿ ಮದಿ ಹಾಗೂ ಕುಮುದ್ವತಿ
ಕಣ್ವ ಜಲಾಶಯ ಇಗ್ಗಲೂರು ಜಲಾಶಯ ಜಲಮೂಲ
ರಾಗಿ ಭತ್ತ ಮಾವು ಮತ್ತು ತೋಟಗಾರಿಕೆ ಬೆಳೆಗಳು

ಚನ್ನಪಟ್ಟಣದ ಸಾಂಪ್ರದಾಯಿಕ ಪ್ರಾಚೀನ ಕಲೆಯಾದ
ಆಲೆಮರದಿಂದ ತಯಾರಿಸುವ ಈ ಗೊಂಬೆಗಳು
ಜಗತ್ ಪ್ರಸಿದ್ಧ ಚನ್ನಪಟ್ಟಣದ ಬಣ್ಣದ ಗೊಂಬೆಗಳು
ಜಾನಪದ ಲೋಕ ನಮ್ಮ ನಾಡಿನ ಸಂಸ್ಕೃತಿ ಪ್ರತೀಕ

ಕನ್ನಡ ಹರಿದಾಸ ಸಾಹಿತ್ಯದ ಪಿತಾಮಹ ಶ್ರೀಪಾದರಾಜ
ಸಾಹಿತಿ ಸಿ ಕೆ ವೆಂಕಟರಾಮಯ್ಯ ದೇ.ಜವರೇಗೌಡರು
ಟಿ ವಿ ವೆಂಕಟಾಚಲ ಶಾಸ್ತ್ರಿ ನಾಗವಾರದ ಕಾಳೇಗೌಡ
ದಲಿತ ಕವಿ ಬಂಡಾಯ ಸಾಹಿತಿ ಸಿದ್ಧಲಿಂಗಯ್ಯನವರು

ಹೆಚ್ ಎಲ್ ನಾಗೇಗೌಡರು ಸಾಲು ಮರದ ತಿಮ್ಮಕ್ಕರು
ವಿಶ್ವಸಂಸ್ಥೆಯಿಂದ ವೃಕ್ಷ ಮಾತೆ ಎಂಬ ಬಿರುದು ಪಡೆದ
ರಾಮನಗರ ಜಿಲ್ಲೆಯ ಖ್ಯಾತನಾಮರು ಈ ಜಿಲ್ಲೆಯವರೆ
ಕರ್ನಾಟಕಕೆ ಮೂರು ಮುಖ್ಯಮಂತ್ರಿಗಳ ಕೊಟ್ಟ ಜಿಲ್ಲೆ

ಕಲಾವತಿ ಪ್ರಕಾಶ್ ಬೆಂಗಳೂರು

Copyright © All rights reserved Newsnap | Newsever by AF themes.
error: Content is protected !!