ಕರುನಾಡ ಜಿಲ್ಲೆಗಳ ಕಿರು ಪರಿಚಯ – 18 – ಚಿತ್ರದುರ್ಗ

Team Newsnap
1 Min Read

ಕಲಾವತಿ ಪ್ರಕಾಶ್
ಬೆಂಗಳೂರು

ಶ್ರೀಕೃಷ್ಣ ಜಾಂಬುವತಿಯರ ಮಗ ಚಿತ್ರಕೇತುವಾಳಿದ
ಈ ಊರಿಗೆ ಚಿತ್ರದುರ್ಗವೆಂಬ ಹೆಸರಾಗಿದೆ
ಎಂಬುದಾಗಿ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ
ಚಿಂತನಕಲ್ಲು ಚಿತ್ರಕಲ್ಲುದುರ್ಗ ಪದಗಳಿಂದ ಬಂತೆಂದಿದೆ

ಹಿರಿಯೂರು ಹೊಳಲ್ಕೆರೆ ಹಾಗೂ ಚಿತ್ರದುರ್ಗ
ಮೊಳಕಾಲ್ಮೂರು ಚಳ್ಳಕೆರೆ ಮತ್ತು ಹೊಸದುರ್ಗ
ಎಂಬ ಆರು ತಾಲ್ಲೂಕುಗಳು ಈ ಜಿಲ್ಲೆಯಲ್ಲಿವೆ
ಭರಮಸಾಗರ ಭೀಮಸಾಗರ ವಾಣಿವಿಲಾಸ ಜಲಾಶಯಗಳಿವೆ

ಮೌರ್ಯರು ಹಾಗೂ ವಿಜಯನಗರದ ಅರಸರು
ಮೊಘಲರು ಪಳಯಗಾರರು ಇಲ್ಲಿ ಆಳಿದರು
ಶೌರ್ಯ ಪರಾಕ್ರಮಕ್ಕೆ ಹೆಸರಾಗಿದ್ದರೀ ನಾಯಕರು
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರು

ಏಳು ಸುತ್ತಿನ ಕೋಟೆ ಚಿತ್ರದುರ್ಗದ ಕೋಟೆಯನ್ನು
ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಿವರಿಸಿರುವ ಲೇಖಕ
ಗಿರಿದುರ್ಗ ಜಲದುರ್ಗ ವನದುರ್ಗವೆಂಬ
ಎಲ್ಲಾ ಲಕ್ಷಣಗಳನ್ನೊಳಗೊಂಡ ವಿಸ್ಮಯಕಾರಿ ಸ್ಮಾರಕ

ಹತ್ತೊಂಬತ್ತು ಅಗಸೆ ಬಾಗಿಲು ೩೮ ದಿಡ್ಡಿ ಬಾಗಿಲು
ಮೂವತ್ತೈದು ಕಳ್ಳ ಕಿಂಡಿ ನಾಲ್ಕು ಗುಪ್ತ ದ್ವಾರಗಳು
ಏಕನಾಥೇಶ್ವರ ಹಿಡಂಬೇಶ್ವರ ಮುಂತಾವುಗಳು
ಬೆಟ್ಟದ ಮೇಲಿರುವ ಪುರಾತನ ದೇವಾಲಯಗಳು

ಮದ್ದು ಬೀಸುವ ಕಲ್ಲು ಒನಕೆ ಕಿಂಡಿ ಎಣ್ಣೆ ಕೊಳಗಳು
ಮದ್ದಿನ ಮನೆಗಳು ಗರಡಿ ಮನೆಗಳು ಕಣಜಗಳು
ಪಹರೆ ಗೃಹಗಳು ಬಂದೂಕು ಕಿಂಡಿಗಳು ಕಣಿವೆಗಳು
ಬುರುಜು ಬತೇರಿಗಳು ವೀಕ್ಷಣ ಗೋಪುರಗಳು

ಸೈನಿಕ ಗೃಹಗಳು ಕೋಟೆಯಲ ನೂರಾರು ಸ್ಮಾರಕಗಳು
ಕೋಟೆ ನೋಡಲು ಬಹು ಸುಂದರ ಕಾದಾಡಲು ಭಯಂಕರ
ಎಂಬ ಮಾತು ಜನಮನದಲ್ಲಿರುವ ಗಾದೆ ಜನಜನಿತ
ಗಂಡು ಮೆಟ್ಟಿದ ನಾಡೆಂಬ ಹೆಸರನ್ನೂ ಪಡೆದಿಹುದು

ಏಳು ಸುತ್ತಿನ ಕೋಟೆ ಚಂದವಳ್ಳಿ ತೋಟ ಗವಿರಂಗಾ
ನಾಯಕನ ಹಟ್ಟಿ ಹಾಲು ರಾಮೇಶ್ವರ ಮಾರಿ ಕಣಿವೆ
ದೊಡ್ಡಘಟ್ಟ ತುರುವನೂರು ಮುರುಘಾ ಮಠ
ಇಲ್ಲಿಯ ನೋಡುವ ಪ್ರಮುಖ ಪ್ರವಾಸಿ ತಾಣಗಳು

ಕಾದಂಬರಿಕಾರ ತ ರಾ ಸುಬ್ಬರಾವ್ ಸೀತಾರಾಮ ಶಾಸ್ತ್ರಿಗಳು
ಬೆಳಗೆರೆ ಜಾನಕಮ್ಮ ಬೆಳಗೆರೆ ಚಂದ್ರಶೆಖರ ಶಾಸ್ತ್ರಿಗಳು
ಅನಸೂಯ ರಾಮರೆಡ್ಡಿ ಬಿ ಎಲ್ ವೇಣುರವರು
ಈ ಜಿಲ್ಲೆಯ ಸಾಹಿತಿಗಳೆಲ್ಲಿವರು ಪ್ರಮುಖರು

Share This Article
Leave a comment