ಕಲಾವತಿ ಪ್ರಕಾಶ್
ಬೆಂಗಳೂರು
ಸಖರಾಯ ಪಟ್ಟಣದ ಮುಖ್ಯಸ್ಥ ರುಕ್ಮಾಂಗದ ಚಿಕ್ಕಮಗಳಿಗಾಗಿಯೇ ನೀಡಿದನಂತೆ ಊರೊಂದ
ಮದುವೆಯಲ್ಲಿ ವರದಕ್ಷಿಣೆಯಾಗಿ ಎಂಬ ಮಾತಿದೆ
ಅಂದಿನಿಂದ ಚಿಕ್ಕಮಗಳೂರು ಇದರ ಹೆಸರಾಗಿದೆ
ಹಳೆಯ ಶಾಸನಗಳಲ್ಲಿ ಕಿರಿಯ ಮುಗುಲಿ ಎಂದಿದೆ
ನರಸಿಂಹರಾಜಪುರ ಶೃಂಗೇರಿ ಚಿಕ್ಕಮಗಳೂರು
ತಾಲ್ಲೂಕುಗಳು ಮೂಡಿಗೆರೆ ತರೀಕೆರೆ ಕೊಪ್ಪ ಕಡೂರು
ಒಟ್ಟು ಈ ಏಳು ತಾಲ್ಲೂಕುಗಳೆಂದು ವಿಭಜಿಸಿದೆ
ಮಲೆನಾಡು ಅರೆಮಲೆನಾಡು ಬಯಲುಸೀಮೆಯೂ
ಒಳಗೊಂಡ ಜಿಲ್ಲೆಯು ಇದುವೇ ಚಿಕ್ಕಮಗಳೂರು
ಕಾಫಿ ಟೀ ಏಲಕ್ಕಿ ಮೆಣಸು ಅಡಿಕೆ ತೆಂಗು ಬೆಳೆಗಳು
ಪಶ್ಚಿಮ ಘಟ್ಟಗಳ ಜಿಲ್ಲೆಯ ತುಂಗಭದ್ರ ಮೂಲಗಳು
ಹೊಯ್ಸಳರು ಶಾತವಾಹನರು ಗಂಗರು ಚೋಳರು
ಆಳುಪ ಸೇನವಾರ ಸೇವುಣ ಸಾಂತರ ನೊಳಂಬರು
ಬೇಲೂರು ನಾಯಕರು ವಿಜಯನಗರದ ಅರಸರು
ಮೈಸೂರಿನ ಅರಸರೂ ಸಹ ಇಲ್ಲಿ ಆಳ್ವಿಕೆ ಮಾಡಿದರು
ಇಲ್ಲಿ ಕೋಟೆಯಲ್ಲಿ ದೊರೆತ ೮ ಪುರಾತನ ಶಾಸನಗಳು
ಆಳಿದ ಕೆಲ ರಾಜರುಗಳು ಅನುಸರಿಸಿದ ಧರ್ಮಗಳು
ಅವರಾಳ್ವಿಕೆಯಲ್ಲಿಯೇ ಕಟ್ಟಿಸಿದ ದೇವಾಲಯಗಳು
ವೀರ ಪರಂಪರೆ ಸಾರಿ ಹೇಳುತ್ತಿವೆ ಅನೇಕ ಸುಳಿವುಗಳು
ಮಾಣಿಕ್ಯಧಾರಾ ಸಿರಿಮನೆ ಜಲಪಾತ ಝರಿ ಜಲಪಾತ
ಹೆಗ್ಗಡೆ ಫಾಲ್ಸ್ ಬಂಜಾಡೆ ಅರ್ಬಿ ಫಾಲ್ಸ್ ಹೆಬ್ಬೆಜಲಪಾತ
ಪ್ರವಾಸಿಗರ ಕೈ ಬೀಸಿ ಕರೆಯುವ ಕಲ್ಹತ್ತಗಿರಿ ಜಲಪಾತ
ದೊಡ್ಡ ಮದಗದಕೆರೆ (ಅಯ್ಯನಕೆರೆ) ಎಂಬುದು ಇಲ್ಲಿದೆ
ಮುಳ್ಳಯ್ಯನ ಗಿರಿ ಕುದುರೆ ಮುಖ ಉದ್ಯಾನ ಇಹುದಿಲ್ಲಿ
ಎತ್ತರದ ಬೆಟ್ಟ ಮುಳ್ಳಯ್ಯನಗಿರಿ ಇದು ಕರ್ನಾಟಕದಲ್ಲಿ
ಬಾಬಾ ಬುಡನ್ಗಿರಿ ಎಂಬುದು ಚಂದ್ರದ್ರೋಣ ಪರ್ವತ
ನಡೆದು ಹೋಗುವರು ಹಿಂದುಗಳು ದತ್ತ ಪೀಠಕ್ಕೆ ಸತತ
ಶೃಂಗೇರಿ ಶಾರದಾಂಬ ಹೊರನಾಡ ಅನ್ನಪೂರ್ಣೇಶ್ವರಿ
ಬೆಳವಾಡಿಯ ವೀರನಾರಾಯಣ ಯೋಗನರಸಿಂಹ
ಋಷ್ಯ ಶೃಂಗ ಮಾರ್ಕಂಡೇಯ ಪ್ರಸಿದ್ಧ ದೇವಾಲಯ
ಮುಂತಾದವುಗಳು ಇಲ್ಲಿನ ಪ್ರೇಕ್ಷಣೀಯ ದೇವಾಲಯ
ಲಕ್ಷ್ಮೀಶ ಕವಿ ಸುಮತೀಂದ್ರ ನಾಡಿಗ ಕೆ ಮರುಳಸಿದ್ದಪ್ಪ
ಕಾದಂಬರಿಕಾರ ಅಶ್ವತ್ಥ ಅರಗ ಲಕ್ಷ್ಮಣರಾವ್ ರವರು
ದಾಶರಥಿ ದೀಕ್ಷಿತ್ ಹಾಸ್ಯ ಲೇಕಕಿ ಸಿನಂದಮ್ಮನವರು
ಮುಂತಾದವರು ಜಿಲ್ಲೆಯ ಹೆಮ್ಮೆಯ ಸಾಹಿತಿಗಳಿವರು
ರಹಮತ್ ತರೀಕೆರೆಯವರ ಕತ್ತಿಯಂಚಿನ ದಾರಿ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಡಿಗೇರಿತು
ಚಿಕ್ಕಮಗಳೂರು ಕರ್ನಾಟಕದ ಸ್ವಿಟ್ಜರ್ಲೆಂಡ್ ಎಂದು
ದೇಶದಲ್ಲೇ ಮೊಟ್ಟ ಮೊದಲು ಕಾಫಿ ಬೆಳೆದ ನಾಡಿದು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು