Karnataka

ಕರುನಾಡ ಜಿಲ್ಲೆಗಳ ಕಿರು ಪರಿಚಯ – 6 – ರಾಯಚೂರು

ಕಲಾವತಿ ಪ್ರಕಾಶ್

ರಾಯಚೂರು

ರಾಯಿ ಎಂದರೆ ಕಲ್ಲೆಂಬ ಅರ್ಥವಂತೆ
ಕಲ್ಲು ಬೆಟ್ಟಗಳೂರು ರಾಯಚೂರಂತೆ
ರಾಯನ ಊರು ರಾಯಚೂರೆಂದು
ಹೆಸರು ಪಡೆದು ಕೊಂಡಿದೆಯಂತೆ

ಶಿಲಾಯುಗದಿಂದಲೇ ಆರಂಭಗೊಂಡಿದೆ
ಇಲ್ಲಿಯ ಇತಿಹಾಸ ಪರಂಪರೆಯು
ಮೌರ್ಯ ಚಾಲುಕ್ಯ ಶಾತವಾಹನ
ಯಾದವ ನಿಜಾಮರಾಳ್ವಿಕೆಯು

ಎನಿತೋ ಸಾಮ್ರಾಜ್ಯಗಳ ಇತಿಹಾಸದ
ಪುಟಗಳ ತೆರೆದಿಡುವ ಕೋಟೆಗಳಿಹವಿಲ್ಲಿ
ಕಾಕತೀಯರು ನಿರ್ಮಿಸಿದಂಥ
ಕೋಟೆ ಇರುವುದೂ ರಾಯಚೂರಿನಲ್ಲಿ

ಜಲದಿಂದಾವೃತ ಜಲದುರ್ಗ ಕೋಟೆ
ಶಾಹಿ ದೊರೆಗಳ ನಿರ್ಮಿತ ಕೋಟೆ
ಇತಿಹಾಸದಲ್ಲೇ ಪ್ರಸಿದ್ಧ ಪೇಟೆ
ನೂರಾರು ಶಾಸನಗಳಿಹ ಮುದ್ಗಲ್ ಕೋಟೆ

ಕೃಷ್ಣ ತುಂಗಭದ್ರಾ ಹರಿಯುವ
ಜಿಲ್ಲೆ ಈ ನಾಡಾದರೂ
ಜಲ ಕ್ಷಾಮ ಎದುರಿಸುವರು
ಬಹು ಭಾಗದ ಈ ಜಿಲ್ಲೆಯ ಜನರು

ಹತ್ತಿಯ ನಾಡೆಂದು ಹೆಸರಾಗಿರುವ
ಭತ್ತದ ಕಣಜವೂ ಈ ಜಿಲ್ಲೆ
ದೇಶದಲ್ಲೇ ಅತಿ ಹೆಚ್ಚು ಟ್ರ್ಯಾಕ್ಟರ್
ಆಮದು ಮಾರಾಟ ಮಾಡುವುದಿಲ್ಲೆ

ಭಾರತದೊಳಗತಿ ಚಿನ್ನದ ಅದಿರಿನ
ಗಣಿ ಇರುವುದೂ ಈ ಜಿಲ್ಲೆಯಲಿ
ಗಣಿಗಾರಿಕೆ ಆರಂಭವು ಕೂಡ
ಅಶೊಕನ ಕಾಲಕೂ ಮೊದಲಲ್ಲೇ

ರಾಯಚೂರಿನ ಶಕ್ತಿ ನಗರದ
ಶಾಖೋತ್ಪನ್ನಕೆ ಕಲ್ಲಿದ್ದಲೇ ಆಧಾರ
ಭಾರತದ ಮೊದಲ ವಿದ್ಯುತ್ ಘಟಕ
ಕರುನಾಡಿನ ಹೆಚ್ಚು ಉತ್ಪಾದನೆಯ ಸ್ಥಾವರ

ಮೂರು ಯುಗಗಳ ತಪೋ ಭೂಮಿ ಈ ಊರು
ಅಮರೇಶ್ವರದ ಕಪಿಲ ಅಗಸ್ತ್ಯಮುನಿ ರೇವಣಸಿದ್ಧರು
ವಚನ ಸಾಹಿತ್ಯದ ಪಿತಾಮಹರಿವರು
ಹೆಸರಾಂತ ಆದಿ ಅಮಾತ್ಯಪ್ಪ ಮೊದಲಿಗರು

ಹರಿದಾಸ ಸಾಹಿತ್ಯದ ಉಗಮದ ಊರು
ಇದೇ ಜಿಲ್ಲೆಯ ರಾಯಚೂರು
ಇಲ್ಲಿಯೆ ಜನಿಸಿದ ದಾಸ ಸಾಹಿತಿಗಳಿವರು
ಅವರೇ ನಮ್ಮ ಜಗನ್ನಾಥ,ವಿಜಯದಾಸರು

ಕನ್ನಡ ಸಾಹಿತ್ಯದ ಗಝಲ್ ಜನಕರೆಂದು
ಹೆಸರು ಪಡೆದವರು ಶಾಂತರಸರು
ಗಿರಿರಾಜ್ ಹೊಸಮನಿ ಭೀಮಸೇನ್ ರಾವ್
ರಾಯಚೂರಿನ ಸಾಹಿತಿಗಳು ಇವರು

ಯಲ್ಲಮ್ಮ ದೇವಿಯ ದೇವಸ್ಥಾನ
ಅಂಬಾದೇವಿಯ ಮಂದಿರದೂರು
ಎರಡನೆ ಶ್ರೀಶೈಲವೆಂಬ ಈ ಊರು
ನೆಲೆಸಿಹರಿಲ್ಲಿ ಮಲ್ಲಿಕಾರ್ಜುನ ದೇವರು

Team Newsnap
Leave a Comment
Share
Published by
Team Newsnap

Recent Posts

ದರ್ಶನ್ , ಪವಿತ್ರ ಜಾಮೀನು ಮುಂದೂಡಿಕೆ:ಮೂವರಿಗೆ ಜಾಮೀನು ಮಂಜೂರು

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿಯಾಗಿರುವ… Read More

September 23, 2024

ಸೆ. 24 ರಂದು ಯುವ ಸಂಭ್ರಮ ಉದ್ಘಾಟನಾ ಸಮಾರಂಭ

ಮೈಸೂರು: ಸೆ. 24 ರಂದು ಸಂಜೆ 6 ಗಂಟೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ದಸರಾ ಮಹೋತ್ಸವ -2024 ರ ಯುವ… Read More

September 23, 2024

ದಸರಾ ಚಲನಚಿತ್ರೋತ್ಸವ 2024- ಪೋಸ್ಟರ್ ಬಿಡುಗಡೆ

ಮೈಸೂರು : ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2024 ರ ಹಿನ್ನೆಲೆಯಲ್ಲಿ ದಸರಾ ಚಲನಚಿತ್ರೋತ್ಸವ ಪೋಸ್ಟರ್ ಗಳನ್ನು ಜಿಲ್ಲಾ… Read More

September 23, 2024

ಮೈಸೂರಿನಲ್ಲಿ ಉಚಿತ ಆಟೋ ರಿಕ್ಷಾ ತರಬೇತಿ

ಸ್ವಾವಲಂಬಿ ಸ್ತ್ರೀ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಅರ್ಹ ಮಹಿಳೆಯರು ಉಚಿತವಾಗಿ ಆಟೋ ರಿಕ್ಷಾ ಚಾಲನಾ ತರಬೇತಿಯನ್ನು ಪಡೆಯಲು ಮತ್ತು ಆದಾಯ… Read More

September 23, 2024

ಶಾಲೆಗಳಿಗೆ 17 ದಿನಗಳ ದಸರಾ ರಜೆ ಘೋಷಣೆ

ಬೆಂಗಳೂರು : ಅಕ್ಟೋಬರ್ 3 ರಿಂದ 20 ತನಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಿಸಿದ್ದು ,ರಾಜ್ಯದ… Read More

September 23, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 23 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 69,600 ರೂಪಾಯಿ ದಾಖಲಾಗಿದೆ. 24… Read More

September 23, 2024