November 15, 2024

Newsnap Kannada

The World at your finger tips!

Map karnataka flag

ಕರುನಾಡ ಜಿಲ್ಲೆಗಳ ಕಿರು ಪರಿಚಯ – 5 -ಬಾಗಲಕೋಟೆ

Spread the love

ಕಲಾವತಿ ಪ್ರಕಾಶ್.
ಬೆಂಗಳೂರು.

ಬಾಗದೇಶ,ಬಾಗಡಿಗ ನಾಡೆಂದು
ಸಾರಿ ಸಾರಿ ಹೇಳುತಿವೆ ಶಾಸನಗಳು
ಬಾದಾಮಿ ಐಹೊಳೆ ಪಟ್ಟದಕಲ್ಲು
ಮೇಣಬಸದಿ ಮಹಾಗುಡ್ಡಗಳು

ಬಾಗಲಕೋಟೆ ಬಾದಾಮಿ ಚಾಲುಕ್ಯರಾಳಿದ ನಾಡು
ಶಿಲ್ಪ ಕಲೆ ವಾಸ್ತು ಶಿಲ್ಪದ ಈ ಬೀಡು
ಕಾವೇರಿಯಿಂದ ನರ್ಮದೆಯವರೆಗಿದ್ದಂಥ
ವಿಶಾಲ ಸಾಮ್ರಾಜ್ಯ ನೀ ನೋಡು

ಗುಹಾಂತರ ದೇವಾಲಯ ಜೈನ ಬಸದಿ
ಬೌದ್ಧ ನೆಲೆಗಳಿವೆ ಇಲ್ಲೂ
ನಂದ ಕದಂಬರ ಚಾಲುಕ್ಯ ಗುಪ್ತರ
ಪಟ್ಟಾಭಿಷೇಕದ ಪಟ್ಟದಕಲ್ಲು

ಬನಶಂಕರಿ ಗುಡಿ ಬಾದಾಮಿ
ಶೈವ ವೈಷ್ಣವ ಜೈನರ ಬಸದಿಗಳ
ಶರಣ ಸಂಪ್ರದಾಯದ ಕೂಡಲಸಂಗಮ
ವಿಶ್ವ ಗುರು ಬಸವಣ್ಣನವರು ಐಕ್ಯವಾದ ಸ್ಥಳ

ಕನ್ನಡ ಕವಿ ರತ್ನ “ರನ್ನರ” ಹುಟ್ಟೂರು
ಬಳಗಲಿ ಕೂಡ ಬಾಗಲಕೋಟೆ
ಸಮಕಾಲಿನ ಸಾಹಿತ್ಯದ ಸಾಹಿತಿಗಳನೇಕರಿಗೆ
ಜನ್ಮದೂರೂ ಈ ಪೇಟೆ

ಸಾಹಿತ್ಯ ಕ್ಷೇತ್ರದಲ್ಲಿ ಸತ್ಯಾನಂದ ಪತ್ರೋಡರು
ಕಾದಂಬರಿಗಾರ್ತಿ ರೇಖಾ ಕಾಖಂಡಕಿ
ಪ್ರಕಾಶ್ ಖಾಡೆ,ಹಿರೇಮಠರು
ಜಾನಪದದ ವೀರೇಂದ್ರ ಬಡಿಗೇರು

ಭಾರತೀಯ ಸೇನೆಗೆ ಮೊದಲಿಗೆ ಸೇರಿಕೊಂಡಿತು
ಶ್ವಾನ ಅದು ಬಾಗಲಕೋಟೆ ಮುಧೋಳ್ ತಳಿ
ಪುನರ್ವಸತಿ ನಗರಗಳಲ್ಲಿ ಮಾದರಿ
ನಗರವೇ ಬಾಗಲಕೋಟೆ ನೀ ತಿಳಿ

ಸಂಸ್ಕೃತಿಯ ರಾಯಭಾರಿ ಇಳಕಲ್ ಸೀರಿ
ಗುಳೇದಗುಡ್ಡದ ಕುಪ್ಪಸದ ಚಂದದ ಖಣ
ರಬಕವಿ ಬನವಾಸಿ ಕೈಮಗ್ಗ, ಅಮಿನಗಡದ
ಕರದಂಟು ತಿನ್ನಲು ಸಿಕ್ಕೀತು ಇದ್ದರೆ ಮಾತ್ರ ಋಣ

Copyright © All rights reserved Newsnap | Newsever by AF themes.
error: Content is protected !!