ಕಾಮಗಾರಿಗೆ ಲಂಚ: ಹರಿಹರ ನಗರಸಭೆ ಎಇ ಲೋಕಾಯುಕ್ತ ಬಲೆಗೆ

Team Newsnap
1 Min Read

ಹರಿಹರ : ಕಾಮಗಾರಿಯೊಂದಕ್ಕೆ ಅನುಮತಿ ನೀಡಲು ಮನೆಯಲ್ಲಿ ಪಡೆಯುತ್ತಿದ್ದಾಗ ಹರಿಹರ ನಗರಸಭೆಯ ಎಇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹರಿಹರ ತಾಲೂಕಿನ ಎಇ ಅಬ್ದುಲ್ ಹಮೀದ್ ಎಂಬುವರು, ಗುತ್ತಿಗೆದಾರರೊಬ್ಬರಿಗೆ ಕಾಮಗಾರಿಗೆ ಅನುಮತಿ ನೀಡುವ ಸಂಬಂಧ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ಗುತ್ತಿಗೆದಾರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಇಂದು ಹರಿಹರದ ಎಇ ಅಬ್ದುಲ್ ಹಮೀದ್ ಅವರು ಗುತ್ತಿಗೆದಾರನಿಂದ 20 ಸಾವಿರ ಲಂಚ ಪಡೆಯುತ್ತಿದ್ದಾಗ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚದ ಹಣದ ಸಮೇತ ಬಂಧಿಸಿದ್ದಾರೆಪುಸ್ತಕ ಪರಿಷ್ಕರಣೆ- ಎಪಿಎಂಸಿ ಕಾಯ್ದೆಗೆ ಕೊಕ್

ನಿನ್ನೆಯಷ್ಟೇ ಹರಿಹರ ನಗರಸಭೆಯ ಸದಸ್ಯೆ ನಾಗರತ್ನ ಎಂಬುವರು ಲಂಚಕ್ಕೆ ಬೇಡಿಕೆ ಇಟ್ಟು, ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಈ ಬೆನ್ನಲ್ಲೇ ಇಂದು ನಗರಸಭೆಯ ಇಂಜಿನಿಯರ್ ಅಬ್ದುಲ್ ಹಮೀದ್ ಬಿದ್ದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

Share This Article
Leave a comment