February 21, 2026

Newsnap Kannada

The World at your finger tips!

madhu po

ಅಡಿಕೆ ಬೆಳೆ ಗಲಾಟೆ- ಗುಂಡು ಹಾರಿಸಿ ಸಹೋದನ ಹತ್ಯೆ: ಆತ್ಮಹತ್ಯೆ ಮಾಡಿಕೊಂಡ ಅಣ್ಣ

Spread the love

ಅಡಿಕೆ ಬೆಳೆ ವಿಚಾರಕ್ಕೆ ನಡೆದ ಜಗಳದಲ್ಲಿ ಅಣ್ಣ, ತಮ್ಮನ ಮೇಲೆ ಗುಂಡು ಹಾರಿಸಿದ್ದಾರೆ. ಇದರ ಪರಿಣಾಮ ಗುಂಡೇಟಿಗೆ ಸಹೋದರ ಮಧು (42) ಎಂಬಾತ ಬಲಿಯಾಗಿದ್ದಾರೆ.

ಪೊನ್ನಂಪೇಟೆ ತಾಲ್ಲೂಕಿನ ಕಿರಗೂರಿನಲ್ಲಿ ಘಟನೆ ನಡೆದಿದೆ. ಕಿರಗೂರು ಗ್ರಾಮದ ಮಧು (42) ಮೃತ ದುರ್ದೈವಿ.

ಮಧುಗೆ ಗುಂಡೇಟು ಹೊಡೆದಾಗ ತಡೆಯಲು ಹೋದ ತನ್ನ ಪತ್ನಿ ಯಶೋಧ (55) ಮೇಲೂ ಸಾಗರ್​​ ಸೋಮಯ್ಯ ಗುಂಡು ಹಾರಿಸಿದ್ದಾರೆ. ಇದರ ಪರಿಣಾಮ ಯಶೋಧ (50) ಸ್ಥಿತಿ ಭಾರೀ ಗಂಭೀರವಾಗಿದೆ.

ಗುಂಡು ಹಾರಿಸಿದ ಬಳಿಕ ಕೊಲೆ ಆರೋಪಿ ಸಾಗರ್​ ಸೋಮಯ್ಯ ಕೂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಗೋಣಿಕೊಪ್ಪಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!