ಕೃಷಿ ಕಾಯ್ದೆಗಳಿಗೆ ಬ್ರೇಕ್ ಹಾಕಿ : ಇಲ್ಲದಿದ್ದರೆ ನಾವು ತಡೆಯುತ್ತೇವೆ ಕೇಂದ್ರಕ್ಕೆ ಸುಪ್ರೀಂ ಛೀಮಾರಿ

Team Newsnap
2 Min Read
Presidential Election - Nomination from 11 candidates #thenewsnap #kannadanews #presidental_election #latest_news #bengaluru #delhi #election2022

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುವ ಸಂಬಂಧ ಸುಪ್ರೀಂ ಕೋಟ್೯ ಕೇಂದ್ರಕ್ಕೆ ಚಾಟಿ ಬೀಸಿದೆ.

ಕೃಷಿ ಕಾಯ್ದೆ ಹಾಗೂ ಪ್ರತಿಭಟನೆ ಗೆ ಸಂಬಂಧಿಸಿದಂತೆ ರೈತರು ಸಲ್ಲಿಸಿದ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡರ
ಸುಪ್ರೀಂ ಕೋರ್ಟ್ ಕಾಯ್ದೆಗಳನ್ನು ನೀವು ತಡೆಹಿಡಿಯುತ್ತೀರಾ ಅಥವಾ ಈ ಕೆಲಸವನ್ನು ನಾವು ಮಾಡಬೇಕೆ? ಎಂದು ಪ್ರಶ್ನಿಸಿ , ಈ ವಿಷಯದಲ್ಲಿ ಯಾಕೆ ಒಣ ಪ್ರತಿಷ್ಠೆ ತೋರಿತ್ತೀರಾ ಎಂದು ಖಾರವಾಗಿ ಕೇಳಿದೆ.

ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯವು ಪ್ರತಿಭಟನೆಯ. ಪ ರಿಸ್ಥಿತಿ ತುಂಬಾ ಹದಗೆಟ್ಟಿದೆ. ಏನಾದರೂ ತೊಂದರೆಯಾದರೆ ಪ್ರತಿಯೊಬ್ಬರೂ ಜವಾಬ್ದಾರರಾಗುತ್ತೇವೆ” ಎಂದು ಮುಖ್ಯ ನ್ಯಾಯಾಧೀಶ ಎಸ್.ಎ.ಬೊಬ್ಡೆ ತೀಕ್ಷ್ಣವಾಗಿ ಚುಚ್ಚಿ ದರು.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಚಿಸುವ ಸಮಿತಿಯು ವರದಿ ಸಲ್ಲಿಸುವವರೆಗೆ ಈ ಕಾಯ್ದೆಗಳನ್ನು ತಡೆ ಹಿಡಿಯಿರಿ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಬೋಬಡೆ ಮತ್ತು ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು ಸ್ಪಷ್ಟವಾಗಿ ಹೇಳಿದೆ.

ಕೆಲವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ವೃದ್ಧರು ಮತ್ತು ಮಹಿಳೆಯರು ಆಂದೋಲನದಲ್ಲಿ ಭಾಗವಾಗಿದ್ದಾರೆ. ಕೃಷಿ ಕಾನೂನುಗಳು ಉತ್ತಮವೆಂದು ಹೇಳುವ ಒಂದೇ ಒಂದು ಮನವಿಯನ್ನು ಸಹ ಸಲ್ಲಿಸಲಾಗಿಲ್ಲ.‌ ಕಾಯ್ದೆಗಳ ಅನುಷ್ಟಾನವನ್ನು ತಡೆದ ನಂತರವೂ ನೀವು ಪ್ರತಿಭಟನೆಯನ್ನು ಮುಂದುವರೆಸಬಹುದು. ಆದರೆ ಇಲ್ಲಿಯೇ ಪ್ರತಿಭಟನೆ ಮಾಡುತ್ತೀರಾ ಅಥವಾ ಬೇರೆಡೆಗೆ ಹೋಗುತ್ತೀರಾ” ಎಂದು ರೈತರನ್ನು ಪ್ರಶ್ನಿಸಿದೆ.

ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲ ವೇಣುಗೋಪಾಲ್ ಎರಡು-ಮೂರು ರಾಜ್ಯಗಳ ರೈತರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಲ್ಲಿ ದಕ್ಷಿಣ ಭಾರತದ ಅಥವಾ ಪಶ್ಚಿಮ ಭಾರತದ ಯಾವುದೇ ರೈತರು ಭಾಗಿಯಾಗಿಲ್ಲ” ಎಂದು ಒತ್ತಿ ಹೇಳಿದರು.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೂ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಇತ್ತ ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಪದೇ ಪದೇ ಹೇಳುತ್ತಲೇ ಇದೆ. ಇದರ ಭಾಗವಾಗಿ ಇದುವರೆಗೂ 8 ಸುತ್ತಿನ ಮಾತುಕತೆಗಳು ನಡೆದಿದ್ದು, ಅವುಗಳೆಲ್ಲವೂ ವಿಫಲವಾಗಿವೆ.

ಈ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯನ್ನು ನಡೆಸುವುದಾಗಿ ರೈತರು ಹೇಳಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆಗೆ ಜನವರಿ 15 ರಂದು ರೈತರನ್ನು ಆಹ್ವಾನಿಸಿದೆ.

Share This Article
Leave a comment