ಶಿಕ್ಷಕರು ಮಕ್ಕಳಿಗೆ Home Work ಕೊಡುವಂತಿಲ್ಲ! ಹೋಮ್ ವರ್ಕ್​ಗೆ ಬ್ರೇಕ್ ಹಾಕಲು ಚಿಂತನೆ

Team Newsnap
2 Min Read

ಹೋಂವರ್ಕ್ ​.. ಹೋಂ ವರ್ಕ್.. Home Work.. ಈ ಹೆಸರು ಕೇಳಿದ್ರೆ ಬಹುತೇಕ ಮಕ್ಕಳಿಗೆ ಒಂಥರಾ ಬೋರು , ಬೇಜಾರು. ಪೋಷಕರಿಗೂ ಆತಂಕ.

ಆದರೆ ಖಾಸಗಿ ಶಾಲೆಗಳು ಹೋಂವರ್ಕ್ ಹೆಸರಲ್ಲಿ ಕೊಡುವ ಟಾರ್ಚರ್​ ನಿಂದ ಮಕ್ಕಳು ಕಲಿಕೆಯಲ್ಲಿ ಕುಂಠಿತವಾಗ್ತಿದೆ‌. ಅದಕ್ಕೆ ಈಗ ಶಿಕ್ಷಣ ಇಲಾಖೆ ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಮಕ್ಕಳು ಬ್ಯಾಗು ಹಾಕಿಕೊಂಡು ಶಾಲೆಗೆ ಬೆಳಗ್ಗೆ ಮುಖ ಮಾಡಿದರೆ ಬರೋದು ಮತ್ತೆ ಮಧ್ಯಾಹ್ನ ಇಲ್ಲ ಸಂಜೆ ಅರ್ಧ ದಿನವನ್ನು ಶಾಲೆಯಲ್ಲಿ ಕಳೆದು ಬರುವ ಮಕ್ಕಳು ಉಳಿದ ಸ್ವಲ್ಪ ಸಮಯದಲ್ಲಿ ಕೂಡ ಮನೆಯವರ ಜೊತೆ ಕಳೆಯೋದಕ್ಕೆ ಆಗಲ್ಲ. ಹೀಗಾಗಿ ಹೋಂ ವರ್ಕ್ ರದ್ದುಗೊಳಿಸಲಿ ಎಂದು ಪೋಷಕರಾದ ಸುಧಾಗೌಡರ ಒತ್ತಾಯ.

2ನೇ ಕ್ಲಾಸ್​ವರೆಗಿನ ಮಕ್ಕಳಿಗೆ No Home Work

ಈ ಹೋಂ ವರ್ಕ್ ವಿಚಾರದ ಬಗ್ಗೆ ಶಿಕ್ಷಣ ಇಲಾಖೆ ಕೂಡ ದಿಟ್ಟ ನಿರ್ಣಯ ಕೈಗೊಂಡಿದೆ. ಇನ್ಮುಂದೆ ಎರಡನೇ ತರಗತಿಯವರೆಗಿನ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ ಎಂಬ ಬಗ್ಗೆ ಚಿಂತನೆ ನಡೆಸಿದೆ.

ಸರ್ಕಾರಿ ಶಾಲೆ ಮಕ್ಕಳಿಗೆ ಈಗಾಗಲೇ ನಲಿ-ಕಲಿ ರೀತಿ ಶಿಕ್ಷಣ ಒದಗಿಸಲು ಚಿಂತನೆ ನಡೆಸಿದೆ. ಈ ಪ್ರಸಕ್ತ ವರ್ಷದಿಂದಲೇ ಸರ್ಕಾರಿ ಶಾಲೆ ಮಕ್ಕಳಿಗೆ ನಲಿ-ಕಲಿ ರೀತಿ ಪುಟ್ಟ ಮಕ್ಕಳಿಗೆ ಶಿಕ್ಷಣ ಒದಗಿಸಲು ನಿರ್ಧರಿಸಲಾಗಿದೆ.

ಹೋಮ್ ವರ್ಕ್​ಗೆ ಬ್ರೇಕ್ ಹಾಕಲು ನಿರ್ಧಾರ

ಮದ್ರಾಸ್ ಹೈಕೋರ್ಟ್ ಹಾಗೂ ಕೇಂದ್ರ ಶಿಕ್ಷಣ ಸಚಿವರ ಹೇಳಿಕೆ ಹಿನ್ನೆಲೆ ರಾಜ್ಯದಲ್ಲಿ ಮಕ್ಕಳಿಗೆ ಹೋಮ್ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ, ಎನ್ ಇ ಪಿಯಲ್ಲಿ ಸ್ಪಷ್ಟವಾಗಿ 2ನೇ ತರಗತಿವರೆಗೆ ಮಕ್ಕಳಿಗೆ ಹೋಂ ವರ್ಕ್ ನೀಡುವಂತಿಲ್ಲ ಅಂತ ಉಲ್ಲೇಖವಿದೆ.

ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್‌ ವರ್ಕ್ ನೀಡುವಂತಿಲ್ಲ. ಆದ್ರೆ ಖಾಸಗಿ ಶಾಲೆಯಲ್ಲಿ ಅತಿ ಹೆಚ್ಚು ಹೋಂ ವರ್ಕ್ ನೀಡುತ್ತಾರೆ. ಖಾಸಗಿ ಶಾಲೆಗಳಲ್ಲಿ ಬಾಲ್ಯಾವಸ್ಥೆಯ ಮಕ್ಕಳಿಗೆ ವಿದ್ಯಾಭ್ಯಾಸದ ಒತ್ತಡ ಹೇರಬಾರದು.

ಖಾಸಗಿ ಶಾಲೆಯಲ್ಲಿ ಕೂಡ ಹೋಂ ವರ್ಕ್​ ನಿಷೇಧದ ಬಗ್ಗೆ ಶಿಕ್ಷಣ ಇಲಾಖೆ ಒಲವು ತೋರಿದೆ. ಇನ್ ಇ ಪಿ‌ ಜಾರಿ ಮುನ್ನವೇ ಖಾಸಗಿ ಶಾಲೆಯಲ್ಲಿ ಹೋಂ ವರ್ಕ್ ಸ್ಥಗಿತಗೊಳಿಸುವ ಕುರಿತು ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳುತ್ತಾರೆ.

Share This Article
Leave a comment