ಆನ್​​ಲೈನ್​​ ಗೇಮ್​​ ಆಡಬೇಡ ಎಂದು ತಾಯಿ ಎಂದದ್ದಕ್ಕೆ 16 ವರ್ಷದ ಬಾಲಕ ಆತ್ಮಹತ್ಯೆ

Team Newsnap
1 Min Read

ಆನ್​ಲೈನ್ ಗೇಮ್​ ಆಡಬೇಡ ಮಗನೇ ಎಂದು ತಾಯಿ ಹೇಳಿದ್ದಕ್ಕೆ ಬಾಲಕನೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಓಂ ಭಾರತ್ (16) ಮೃತ ದುರ್ದೈವಿ ಬಾಲಕ ಪ್ರತಿ ಬಾರಿಯು ಆನ್​ಲೈನ್​ ಗೇಮ್ ಆಡುತ್ತಿದ್ದ. ಈ ಸಂದಂರ್ಭದಲ್ಲಿ ​ತಾಯಿ ಮೊಬೈಲ್​ ಕಸಿದುಕೊಂಡು ಓದಿನ ಕಡೆ ಗಮನಹರಿಸು ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಬಾಲಕ ಮನನೊಂದು ಡೇತ್​ ನೋಟ್​ ಬರೆದಿದ್ದಾನೆ. ಬಳಿಕ ರೈಲಿನ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಾಲಕನ ಪತ್ರ ನೋಡಿದ ತಾಯಿ ದಿಂಡೋಶಿ ತಕ್ಷಣವೇ ಪೊಲೀಸ್ ಠಾಣೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇರೆಗೆ ಪೊಲೀಸರು ಬಾಲಕನ ಹುಡುಕಾಟ ಆರಂಭಿಸಿದರು. ಆಗ ಮಲಾಡ್ ಮತ್ತು ಕಾಂಡಿವಲಿ ಸ್ಟೇಷನ್​ಗಳ ನಡುವೆ ರೈಲು ಹಳಿಯ ಮೇಲೆ ಒಂದು ಮೃತದೇಹ ದೊರೆತಿರುವ ಮಾಹಿತಿ ಲಭ್ಯವಾಗುತ್ತದೆ.

ಇದನ್ನು ಓದಿ – ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ

ತಕ್ಷಣ ಅಲ್ಲಿಗೆ ತೆರಳಿ ನೋಡಿದಾಗ ಅದೇ ಬಾಲಕನೇ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬರುತ್ತದೆ. ಹೀಗಾಗಿ ಬೋರಿವಲಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a comment