ಡಾಬಾದಲ್ಲಿ ಊಟ ಮಾಡುತ್ತಿದ್ದ ಯುವಕನನ್ನು ಇರಿದು ಬರ್ಬರವಾಗಿ ಕೊಲೆಗೈದ ಘಟನೆ ಕಳೆದ ರಾತ್ರಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮ ಸಿಂಚನ ಡಾಬಾದಲ್ಲಿ ನಡೆದಿದೆ. ಕೊಪ್ಪ ಗ್ರಾಮದ ಸಾಗರ್ (25) ಹತ್ಯೆಯಾದ ಯುವಕ.
ಡಾಬಾದಲ್ಲಿ ಊಟ ಮಾಡುತ್ತಿದ್ದಾಗ ಪಕ್ಕದ ಟೇಬಲಿನಲ್ಲಿ ಗಲಾಟೆ ನಡೆಯಿತು. ಈ ವೇಳೆ ಗಲಾಟೆ ಬಿಡಿಸಲು ಸಾಗರ್ ಮಧ್ಯಪ್ರವೇಶ ಮಾಡಿದ್ದ. ಆಗ ಸಾಗರ್ ಎದೆಗೆ ಗಿರೀಶ್ ಚಾಕುವಿನಿಂದ ಚುಚ್ಚಿದ್ದಾನೆ. ತಕ್ಷಣ ಸಾಗರ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಗೆ ರವಾನೆ ಮಾಡಲಾಯಿತು. ಆ ವೇಳೆ ಆತ ಕೊನೆಯುಸಿರೆಳೆದಿದ್ದನು.
ಘಟನೆ ಸಂಬಂಧಿಸಿದಂತೆ ಓರ್ವ ಆರೋಪಿ ರಾಕೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತಿಬ್ಬರಾದ ಗಿರೀಶ್ ಹಾಗೂ ಪ್ರತಾಪ್ ಗಾಗಿ ಶೋಧ ನಡೆಸುತ್ತಿದ್ದಾರೆ. ಕೊಪ್ಪ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- PSI ನೇಮಕಾತಿ ಅಕ್ರಮ : ಶಾಂತ- ರವೀಂದ್ರ ಎಸ್ಕೇಪ್ – ಸಿಡಿಐಗೆ ಇವರನ್ನು ಪತ್ತೆ ಮಾಡುವುದೇ ಸವಾಲು
- ಶಾಸಕ ಜಿ ಟಿ ಡಿಯನ್ನು ಪಕ್ಷದಲ್ಲಿ ಉಳಿಸುತ್ತೇನೆ : 2 ಕಂಡಿಷನ್ ಗೆ ಒಪ್ಪುತ್ತೀರಾ – ಸಿ ಎಸ್ ಪುಟ್ಟರಾಜು
- ವೈದ್ಯರ ನಿರ್ಲಕ್ಷ್ಯ : 19 ದಿನದ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ಸಾವು
- ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ – ಬೀದರ್ ನ ಒಂದೇ ಕುಟುಂಬದ 7 ಜನ ದುರಂತ ಸಾವು
- IPL ಪಂದ್ಯದ ಸಮಾರೋಪದಲ್ಲಿ ಮಂಡ್ಯ – ಶಿವಮೊಗ್ಗ ಕಲಾವಿದರಿಂದ ಪೂಜಾ ಕುಣಿತ, ಡೊಳ್ಳು ಕುಣಿತ
More Stories
PSI ನೇಮಕಾತಿ ಅಕ್ರಮ : ಶಾಂತ- ರವೀಂದ್ರ ಎಸ್ಕೇಪ್ – ಸಿಡಿಐಗೆ ಇವರನ್ನು ಪತ್ತೆ ಮಾಡುವುದೇ ಸವಾಲು
ಶಾಸಕ ಜಿ ಟಿ ಡಿಯನ್ನು ಪಕ್ಷದಲ್ಲಿ ಉಳಿಸುತ್ತೇನೆ : 2 ಕಂಡಿಷನ್ ಗೆ ಒಪ್ಪುತ್ತೀರಾ – ಸಿ ಎಸ್ ಪುಟ್ಟರಾಜು
ವೈದ್ಯರ ನಿರ್ಲಕ್ಷ್ಯ : 19 ದಿನದ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ಸಾವು