ಮೊಬೈಲ್ ನೋಡಲು ಬಿಡಲಿಲ್ಲವೆಂದು ನೇಣು ಬಿಗಿದು ಬಾಲಕ ಆತ್ಮಹತ್ಯೆ

Team Newsnap
1 Min Read

ಮನೆಯಲ್ಲಿ ಮೊಬೈಲ್ ನೋಡಲು ಬಿಟ್ಟಿಲ್ಲವೆಂದು ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಗಳೂರು ನಗರದಲ್ಲಿ ಜರುಗಿದೆ.

ಕುಲಶೇಖರದ ನಿವಾಸಿ ಜಗದೀಶ್ ಹಾಗೂ ವಿನಯಾ ದಂಪತಿಯ ಪುತ್ರ ಜ್ಞಾನೇಶ್, ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕರ್ನಾಟಕದ ಭದ್ರಾ ಮೇಲ್ದಂಡೆ ಈಗ ರಾಷ್ಟ್ರೀಯ ಯೋಜನೆ – 5,300 ಕೋಟಿ ರು ಅನುದಾನ

ಯಾವಾಗಲೂ ಮೊಬೈಲ್ ನೋಡುತ್ತಾನೆಂದು ತಾಯಿ ಮಗನನ್ನು ಬೈದಿದ್ದು, ಇದರಿಂದ ಖಿನ್ನನಾಗಿದ್ದ ಬಾಲಕ ಸೋಮವಾರ ರಾತ್ರಿ 8:30ರ ವೇಳೆಗೆ ತಾಯಿ ಎದುರಲ್ಲೇ ಮನೆಯ ಕೋಣೆಗೆ ತೆರಳಿದ್ದ. ಮಗ ಸ್ನಾನಕ್ಕೆ ಹೋಗಿದ್ದಾನೆಂದು ಮನೆಯವರು ತಮ್ಮ ಪಾಡಿಗೆ ಇದ್ದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಕಿಟಕಿಯಲ್ಲಿ ನೋಡಿದರೆ, ಬಾಲಕ ಫ್ಯಾನಿಗೆ ಶಾಲು ಬಿಗಿದು ಕೊರಳೊಡ್ಡಿದ್ದಾನೆ.

ತಕ್ಷಣ ಶಾಲು ಬಿಚ್ಚಲಾಯಿತಾದರೂ ಆದಾಗಲೇ ಬಾಲಕ ಬಾರದ ಲೋಕಕ್ಕೆ ಹೋಗಿದ್ದ. ಒಂದು ಕ್ಷಣದ ಸಿಟ್ಟು, ಆವೇಶಕ್ಕೆ ಬಾಲಕ ತನ್ನ ಜೀವನವನ್ನೇ ಕೊನೆಗೊಳಿಸಿದ್ದಾನೆ

ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಜ್ಞಾನೇಶ್ ಕಲಿಯುವುದರಲ್ಲೂ ಮುಂದಿದ್ದ. ಆದರೆ ಮೊಬೈಲ್, ಟಿವಿಯ ಹುಚ್ಚಿನ ಜೊತೆಗೆ ತುಂಟಾಟವೂ ಹೆಚ್ಚಿತ್ತು.

Share This Article
Leave a comment