December 22, 2024

Newsnap Kannada

The World at your finger tips!

poc

ಗಡಿಯಲ್ಲಿ ಗಸ್ತು ತಿರುಗುವ ಸೈನಿಕರನ್ನು ತಡೆಯಲು ಚೀನಾದ ಪ್ರಯತ್ನ

Spread the love

ಭಾರತ-ಚೀನಾ ಗಡಿ ಸಮಸ್ಯೆ ದಿನೇ ದಿನೇ ತಾರಕಕ್ಕೆ ಹೋಗುತ್ತಿದೆ. ಕಳೆದ ವಾರವಷ್ಟೇ ಭಾರತ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರು ರಷ್ಯಾದಲ್ಲಿ‌ ಭೇಟಿಯಾಗಿ ಶಾಂತಿ ಕಾಪಾಡಿಕೊಳ್ಳುವ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆಯನ್ನು ನೀ ಡಿದ್ದರೂ ಸಹ ನಿಯಂತ್ರಣಕ್ಕೆ ಬಂದಿಲ್ಲ. ಗಡಿ ಭಾಗದಲ್ಲಿ ದಿನೇ ದಿನೇ ಉಭಯ ದೇಶಗಳ ಸೈನ್ಯ ಜಮಾವಣೆಗೊಳ್ಳುತ್ತಿರುವುದನ್ನು ನೋಡಿದರೆ ಯುದ್ಧದ ವಾಸನೆ ಪಸರಿಸುವಂತೆ ಕಾಣುತ್ತಿದೆ.

ಇದಕ್ಕೆ ಪೂರಕವೆಂಬಂತೆ ನಿನ್ನೆ ರಾಜ್ಯಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಗಡಿ ವಾಸ್ತವ ರೇಖೆಯಲ್ಲಿ ಗಸ್ತು ತಿರುಗುತ್ತಿರುವ ನಮ್ಮ ಸೈನ್ಯವನ್ನು ಮತ್ತು ಅವರ ನಿಲುಗಡೆಯನ್ನು ಚೀನಾದ ಪಿಒಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ತಡೆಯಲು ಪ್ರಯಾಸ ಪಡುತ್ತಿದೆ. ಆದರೆ ಭಾರತ ಇದ್ಯಾವುದಕ್ಕೂ ಜಗ್ಗುವದಿಲ್ಲ. ಯಾವುದೇ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಯುದ್ಧದ ಬಗ್ಗೆ ಆತಂಕ ಮನೆ ಮಾಡಿದೆ. ಈ ಹಿಂದೆ ಸಂಸತ್ ನಲ್ಲಿ‌ ರಾಜನಾಥ್ ಸಿಂಗ್ ಡೆಪ್ಸಾಂಗ್ ಬಯಲು ಪ್ರದೇಶದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಆದರೆ ಇದೇ ಡೆಪ್ಸಾಂಗ್ ಇಂದು ಬಹು ಮುಖ್ಯವಾದ ಡೆಪ್ಸಾಂಗ್ ಪ್ರದೇಶವಾಗಿ ಮಾರ್ಪಟ್ಟಿದೆ.

ಏನಿದು ಡೆಪ್ಸಾಂಗ್ ಬಯಲು ಪ್ರದೇಶ

೧೯೬೨ರ ಭಾರತ-ಚೀನಾ ಯುದ್ಧದ ನಂತರ ಡೆಪ್ಸಾಂಗ್ ಭೂ ಪ್ರದೇಶದಲ್ಲಿ ಭಾರತೀಯ ಸೈನಿಕರಿಗೆ ಗಸ್ತು ತಿರುಗುವುದಕ್ಕೂ ನಿಷೇಧಿಸಲ್ಪಟ್ಟ ಪ್ರದೇಶವಿದು. ಭಾರತದ ಉತ್ತರದಲ್ಲಿರುವ ಅತೀ ದೊಡ್ಡ, ಯುದ್ಧ ಮಾಡಲು ಆಯಕಟ್ಟಾದ ಪ್ರದೇಶ ಈ ಡೆಪ್ಸಾಂಗ್. ಸುಮಾರು ೧೦೦೦ ಚದರ ಕಿಲೋಮೀಟರ್ ಪ್ರದೇಶದಲ್ಲಿ ೯೦೦ ಚದರ ಕಿಲೋಮೀಟರ್ ಪ್ರದೇಶವನ್ನು ಚೀನಾವೇ ಹೊಂದಿದೆ. ಉಳಿದ ೧೦೦ ಚದರ ಕಿಲೋಮೀಟರ್ ಪ್ರದೇಶ ಭಾರತದ ಅಧೀನದಲ್ಲಿದೆ. ಚೀನಾ ತನ್ನ ಅಧೀನದಲ್ಲಿರುವ ಡೆಪ್ಸಾಂಗ್ ಪ್ರದೇಶದಲ್ಲಿ ಅನೇಕ ಮೂಲ ಸೌಕರ್ಯ ಕಲ್ಪಿಸಿದೆ. ಆದರೆ ಭಾರತಕ್ಕೆ ಸೇರಿದ ಪ್ರದೇಶದಲದಲ್ಲಿ ಯಾವುದೇ ಸೌಕರ್ಯವಿಲ್ಲ. ಚೀನಾ ನಂತರದ ದಿನಗಳಲ್ಲಿ ೧೯೬೨ರಲ್ಲಿ ಮಾಡಿದ್ದಂತೆ ಮತ್ತೆ ಈ ಪ್ರದೇಶದ ಮೂಲಕವೇ ಯುದ್ಧ ಮಾಡಬಹುದಾಗಿದೆ. ಹಾಗಾಗಿಯೇ ಭಾರತೀಯ ಸೈನಿಕರೂ ಗಸ್ತು ತಿರುಗಲು ಅಡ್ಡಿ ಪಡಿಸುತ್ತಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಚೀನಾದ ಡೆಪ್ಸಾಂಗ್ ಪ್ರದೇಶದಲ್ಲಿ ಎಲ್‌ಎಸಿಯಿಂದ ೧೮ ಕಿಮೀ ಒಳಗಡೆ ಚೀನಾ ಸೈನಿಕರು ಬಿಡಾರ ಹೂಡಿರುವದರಿಂದ ಭಾರತೀಯ ಸೈನಿಕರು ಡೆಪ್ಸಾಂಗ್ ನ ವಾಸ್ತವ ನಿಯಂತ್ರಣ ರೇಖೆಯ ಬಳಿ ಗಸ್ತು ಮಾಡಲಾಗದಂತೆ ಚೀನಾ ಸೈನಿಕರು ನಿರ್ಬಂಧ ಹೇರಿದ್ದಾರೆ.

ಡೆಪ್ಸಾಂಗ್ ಬಯಲು ಪ್ರದೇಶದಲ್ಲಿ‌ ಕೆಲ ದಿನಗಳ ತಿಂಗಳ ಹಿಂದಷ್ಟೇ ಸ್ಥಳೀಯ ಆಡಳಿತಗಳು ಗಸ್ತು ತಿರುಗಲು ಉಭಯ ದೇಶಗಳಿಗೆ ಅನುಮತಿಯನ್ನು ನೀಡಿದ್ದವು. ಆದರೆ ಗಡಿಯಲ್ಲಿನ‌ ಜಟಾಪಟಿಯಿಂದ ಈ ವ್ಯವಸ್ಥೆ ಮೇ ತಿಂಗಳಿನಿಂದ ಮುರಿದು ಬಿದ್ದಿದೆ. ಡೆಪ್ಸಾಂಗ್ ಪ್ರದೇಶದ ಮತ್ತೊಂದು ಮಹತ್ವವೆಂದರೆ, ಇಲ್ಲಿಂದ ಕೆಲವೇ ಕಿಮಿ ದೂರದಲ್ಲಿ ಸಿಯಾಚಿನ್ ನದಿಯ ಜಾಡು ಇದೆ. ಇದು ಮುಂದುವರೆದಂತೆ ಓಎ ೯೮೪೨ ಎಂಬ ನಿಯಂತ್ರಣ ರೇಖೆಯನ್ನು ಸೇರುತ್ತದೆ. ಈ ನಿಯಂತ್ರಣ ರೇಖೆಯು ಕರಕೋರಂ ಪಾಸ್ ಬಳಿ ಇದೆ. ಕರಕೋರಂ ಪಾಸ್ ಚಿನಾ ಮತ್ತು ಪಾಕಿಸ್ತಾನಕ್ಕೆ ಭೂ ಮಾರ್ಗವನ್ನು ಕಲ್ಪಿಸುತ್ತದೆ. ಅಕ್ಸಾಯ್ ಚೀನಾ ಕೂಡ ಹತ್ತಿರವಿದೆ. ಇಲ್ಲಿಯೂ ಸಹ ಚೀನಾ ಎಲ್ಲ‌ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ. ಹೀಗೆ ಡೆಪ್ಸಾಂಗ್ ಪ್ರದೇಶ ಚೀನಾಕ್ಕೆ ಎಲ್ಲ ರೀತಿಯಲ್ಲಿ ಅನುಕೂಲವಾಗಿ, ಭಾರತಕ್ಕೆ ಪ್ರತಿಕೂಲವಾಗಿದೆ. ಈ ಪ್ರದೇಶಗಳಿಂದ ಚೀನಾ ತುಂಬಾ ಸುಲಭವಾಗಿ ಪಾಕಿಸ್ತಾನ ಸೇನೆಯ ಸಹಾಯ ತೆಗೆದುಕೊಂಡು ಯುದ್ಧವನ್ನು ಮಾಡಬಹುದಾಗಿದೆ. ಭಾರತವು ಈ ಪ್ರದೇಶದಲ್ಲಿ‌ ಗಸ್ತು ತಿರುಗುವದರಿಂದ ಚೀನಾದ ಯೋಜನೆಗಳು ತುಂಬಾ ಸುಲಭವಾಗಿ ಭಾರತಕ್ಕೆ ತಿಳಿಯಬಹುದು ಎಂಬ ಕಾರಣದಿಂದ ಭಾರತೀಯ ಸೈನ್ಯ ಗಸ್ತು ತಿರುಗುವದನ್ನ ಚೀನಾ ತಡೆಯುತ್ತಿರಬಹುದು.

Copyright © All rights reserved Newsnap | Newsever by AF themes.
error: Content is protected !!