ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ತಾಯಿ ಅರುಣಾ ಭಟಿಯಾ ಇಂದು ವಿಧಿವಶರಾಗಿ ದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅರುಣಾ ಅವರನ್ನ ಮುಂಬೈನ ಹಿರಾನಂದನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಅಂತಾ ನಟ ಅಕ್ಷಯ್ ಕುಮಾರ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ನನ್ನ ತಾಯಿ ನನಗೆ ಎಲ್ಲವೂ ಆಗಿದ್ದಳು. ಇಂದು ಅವಳು ನನ್ನನ್ನು ಬಿಟ್ಟು ಹೋಗಿರೋದಕ್ಕೆ ತೀವ್ರ ನೋವಾಗುತ್ತಿದೆ. ಇಂದು ಬೆಳಗ್ಗೆ ನನ್ನ ಅಮ್ಮ, ಅರುಣಾ ಭಟಿಯಾ ಶಾಂತಿಯುತವಾಗಿ ಈ ಜಗತ್ತನ್ನು ತೊರೆದು ಬೇರೊಂದು ಪ್ರಪಂಚದಲ್ಲಿರುವ ಅಪ್ಪನ ಜೊತೆ ಸೇರಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ನನ್ನ ಕುಟುಂಬಕ್ಕೆ ನೀವು ಮಾಡುತ್ತಿರುವ ಪ್ರಾರ್ಥನೆಯನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್