ಬೆಂಗಳೂರು : ಬಿಎಂಟಿಸಿ ಬಸ್‍ಗಳನ್ನು ಪ್ರವಾಸ, ಮದುವೆ ಹಾಗೂ ಶುಭ ಸಮಾರಂಭಗಳಿಗೆ ಬಾಡಿಗೆಗೆ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಂದಾಗಿದೆ.
ವಿವಿಧ ಮಾದರಿಗಳ ಬಸ್ಸುಗಳನ್ನು ಸಾಂದರ್ಭಿಕ ಒಪ್ಪಂದದ ಆಧಾರದ ಮೇರೆಗೆ ಪರಿಚಯಿಸಿ ಉತ್ತಮ ದರಗಳೊಂದಿಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಾಡಿಗೆಗೆ ನೀಡಲು ಬಿಎಂಟಿಸಿ ನಿರ್ಧಸಿರಿದೆ.
ಇದನ್ನು ಓದಿ – ಬೆಂಗಳೂರಿನಲ್ಲಿ ದೇಶದ ಅತಿ ಎತ್ತರದ ವೀಕ್ಷಣಾ ಗೋಪುರ
ಬಿಎಂಟಿಸಿ ಬಸ್‍ಗಳ ವಿವಿಧ ಮಾದರಿಯ ದರದ ಪಟ್ಟಿ ಹೀಗಿದೆ :
ಸಾಮಾನ್ಯ ಬಸ್ :
- 40 ಆಸನಗಳಿಗೆ, 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀವರೆಗೆ, ಪ್ರತಿ ಕಿ.ಮೀಗೆ 50 ರೂ.ನಂತೆ 7,500 ರೂ. ನಿಗದಿಪಡಿಸಲಾಗಿದೆ. 12 ಗಂಟೆ ಅವಧಿಗೆ, ಕನಿಷ್ಠ 200 ಕಿ.ಮೀ, ಪ್ರತಿ ಕಿ.ಮೀ ದರ 48 ರೂ.ನಂತೆ 9,600 ರೂ.
- 24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀ, ಪ್ರತಿ ಕಿ.ಮೀ ದರ 44 ರೂ.ನಂತೆ 11,000 ರೂ. ನಿಗದಿಪಡಿಸಲಾಗಿದೆ. 24 ಗಂಟೆ ಅವಧಿಗೆ (ನಗರದ ಹೊರಗೆ) ಕನಿಷ್ಠ 300 ಕಿ.ಮೀ ವರೆಗೆ, ಪ್ರತಿ ಕಿ.ಮೀಗೆ ದರ 44 ರೂ.ನಂತೆ 13,200 ರೂ.
- 24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀ, ಪ್ರತಿ ಕಿ.ಮೀ ದರ 44 ರೂ.ನಂತೆ 11,000 ರೂ. ನಿಗದಿಪಡಿಸಲಾಗಿದೆ. 24 ಗಂಟೆ ಅವಧಿಗೆ (ನಗರದ ಹೊರಗೆ) ಕನಿಷ್ಠ 300 ಕಿ.ಮೀ ವರೆಗೆ, ಪ್ರತಿ ಕಿ.ಮೀಗೆ ದರ 44 ರೂ.ನಂತೆ 13,200 ರೂ.
ಮಿನಿ ಬಸ್ :
- 31 ಆಸನಗಳಿಗೆ, 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀವರೆಗೆ ಪ್ರತಿ ಕಿ.ಮೀಗೆ 47 ರೂ.ನಂತೆ 7,050 ರೂ. ನಿಗದಿಪಡಿಸಲಾಗಿದೆ. 12 ಗಂಟೆ ಅವಧಿಗೆ (ಕನಿಷ್ಠ 200 ಕಿ.ಮೀಗೆ) ಪ್ರತಿ ಕಿ.ಮೀಗೆ 45 ರೂ.ನಂತೆ 9,000 ರೂ.
- 24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀಗೆ, ಪ್ರತಿ ಕಿ.ಮೀ ದರ 42 ರೂಪಾಯಿಯಂತೆ 10,500, 24 ಗಂಟೆ ಅವಧಿಗೆ (ನಗರದ ಹೊರಗೆ) ಕನಿಷ್ಠ 300 ಕಿ.ಮೀ ವರೆಗೆ ಪ್ರತಿ ಕಿ.ಮೀ 42 ರೂ.ನಂತೆ 12,600 ರೂ.
- ಬಿ.ಎಸ್- 6 ಬಸ್ 41 ಆಸನಗಳಿಗೆ 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀವರೆಗೆ, ಪ್ರತಿ ಕಿ.ಮೀಗೆ 60 ರೂ.ನಂತೆ 9,000 ರೂ. ಹಾಗೂ 12 ಗಂಟೆ ಅವಧಿಗೆ, ಕನಿಷ್ಠ 200 ಕಿ.ಮೀಗೆ ಪ್ರತಿ ಕಿ.ಮೀಗೆ 55 ರೂ.ನಂತೆ 11,000 ರೂ.
- 24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀಗೆ ಪ್ರತಿ ಕಿ.ಮೀಗೆ 50 ರೂ.ನಂತೆ 12,500, 24 ಗಂಟೆ ಅವಧಿಗೆ (ನಗರದ ಹೊರಗೆ) ಕನಿಷ್ಠ 300 ಕಿ.ಮೀಗೆ ಪ್ರತಿ ಕಿ.ಮೀ ದರ 50 ರೂ.ನಂತೆ 15,000 ರೂ .
More Stories
ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ