ಬೆಂಗಳೂರಿನಲ್ಲಿ ದೇಶದ ಅತಿ ಎತ್ತರದ ವೀಕ್ಷಣಾ ಗೋಪುರ

Team Newsnap
1 Min Read

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( BBMP ) ದೇಶದ ಅತಿ ದೊಡ್ಡ ವೀಕ್ಷಣಾ ಗೋಪುರ (ಸ್ಕೈಡೆಕ್) ಯಶವಂತಪುರ ಅಥವಾ ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣ ಮಾಡಲು ಮುಂದಾಗಿದೆ.

ಈ ವೀಕ್ಷಣಾ ಗೋಪುರ ನಿರ್ಮಾಣ ಯೋಜನೆಯ ಪ್ರಸ್ತಾವನೆಯನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಬಿಎಂಪಿ ತಯಾರಿಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಗೆ ವೀಕ್ಷಣಾ ಗೋಪುರ ನಿರ್ಮಾಣದ ಬಗ್ಗೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳು, ಕೆಲವು ಖಾಸಗಿ ಕಂಪನಿಗಳ ಮುಖ್ಯಸ್ಥರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ವಿಕ್ಷಣಾ ಗೋಪುರ ನಿರ್ಮಾಣ ಬೆಂಗಳೂರಿನ ಯಶವಂತಪುರ ಅಥವಾ ಬೈಯಪ್ಪನಹಳ್ಳಿ ಎನ್‌ಜಿಎಫ್‌ ಬಳಿ ಮಾಡಬೇಕು ಎಂದು ಪ್ರಸ್ತಾಪಿಸಲಾಗಿದೆ.

ಸಿಎಂ ಸಿದ್ದರಾಮಯ್ಯ ,ಯಾವ ಸ್ಥಳದಲ್ಲಿ ಗೋಪುರ ನಿರ್ಮಾಣ ಮಾಡಿದರೇ ಸೂಕ್ತ ಎಂಬುದರ ಬಗ್ಗೆ ವರದಿಯನ್ನು ಸಿದ್ಧಪಡಿಸಿಕೊಂಡು ಬರುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಗೋಪುರ ಬರೋಬ್ಬರಿ 821 ಅಡಿ ಎತ್ತರ ಇರಲಿದ್ದು, ಕಟ್ಟಡದ ತುದಿಯಲ್ಲಿ ಸುಮಾರು 100ರಿಂದ 150 ಜನರು ನಿಂತು ಸುತ್ತಲೂ 360 ಡಿಗ್ರಿ ಕೋನದಲ್ಲಿ ಇಡೀ ಬೆಂಗಳೂರನ್ನು ನೋಡಬಹುದಾಗಿದೆ.

ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ವೀಕ್ಷಣಾ ಗೋಪುರ ದೇಶದಲ್ಲಿಯೇ ಅತಿ ದೊಡ್ಡದು ಎಂದೆನಿಸಿಕೊಳ್ಳಲಿದೆ. ಸಾರ್ವಜನಿಕರಿಗೆ 821 ಅಡಿ ಎತ್ತರದ ವೀಕ್ಷಣಾ ಗೋಪುರದ ತುಟ್ಟತುದಿಗೆ ಹೋಗಲು ಅವಕಾಶ ಕಲ್ಪಿಸಲಾಗುತ್ತದೆ.ಮೈಸೂರಿನಲ್ಲಿ ಉಪ ತಹಶೀಲ್ದಾರ್‌ ಕಿರುಕುಳ – ಕಂಪ್ಯೂಟರ್‌ ಆಪರೇಟರ್‌ ಡೆತ್ ನೋಟ್ ಬರೆದು ಆತ್ಮಹತ್ಯೆ 

ಈ ವೀಕ್ಷಣಾ ಗೋಪುರ ಬೇರೆ ರಾಜ್ಯ, ದೇಶಗಳಿಂದ ಬೆಂಗಳೂರು ನೋಡಲು ಬರುವ ಪ್ರವಾಸಿಗರಿಗೆ ಒಂದು ಸುಂದರ ಅನುಭೂತಿ ನೀಡಲಿದೆ.

Share This Article
Leave a comment