ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಗೆ ಚಾಲನೆ ನೀಡಿದ BMRCL

Team Newsnap
1 Min Read

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಗೆ ಬಿಎಂಆರ್‌ಸಿಎಲ್ ಇಂದು ಚಾಲನೆ ನೀಡಿದೆ.

NCMC ಕಾರ್ಡ್ ಗೂ 50 ರೂ ದರವಿದ್ದು,ಸ್ಮಾರ್ಟ್ ಕಾರ್ಡ್ ನಂತೆ ಪ್ರಯಾಣದ ಶೇ 5 ರಷ್ಟು ರಿಯಾಯ್ತಿ ಅನ್ವಯವಾಗಲಿದೆ.

ಈ ಕಾರ್ಡ್ ಅನ್ನು ದೇಶದ ಎಲ್ಲ ಸಾರಿಗೆ ವ್ಯವಸ್ಥೆಯಲ್ಲಿ ಪೆಟ್ರೋಲ್ ಬಂಕ್ ಶಾಪಿಂಗ್ ಮಾಲ್ ದಿನಸಿ ಮಳಿಗೆಗಳಲ್ಲೂ ಬಳಸಬಹುದಾಗಿದೆ.

ಮುಂದಿನ ದಿನಗಳಲ್ಲಿ ಶಾಪಿಂಗ್ ಹಾಗೂ ಪ್ರಯಾಣಕ್ಕೆ ಪ್ರತ್ಯೇಕ ಕಾರ್ಡ್ ಗಳ ಬಳಕೆಯನ್ನು ಕಡಿಮೆ ಮಾಡಲು ಇದು ಅನುಕೂಲವಾಗಲಿದೆ.

ಮೆಟ್ರೋ ನಿಲ್ದಾಣದಲ್ಲಿ ಕಾಂಟಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡುಗಳನ್ನು ಬೆಳಿಗ್ಗೆ 8 ರಿಂದ 11 ಗಂಟೆ ಹಾಗೂ ಸಂಜೆ 5 ರಿಂದ ರಾತ್ರಿ 8 ಗಂಟೆವರೆಗೆ ಮಾತ್ರ ಪಡೆದುಕೊಳಲು ಅವಕಾಶವಿದೆ.

ಪ್ರಯಾಣಿಕರು ಇದನ್ನು ಪಡೆಯಲು nammametro.agsindia.com ವೆಬ್ ಸೈಟ್ ಅಥವಾ BMRCL ,RBL Bank NCMC ಮೊಬೈಲ್ ಆಪ್ ನಲ್ಲಿ ಸ್ವಯಂ ನೊಂದಣಿ ಮಾಡಿಕೊಂಡು ನೋಂದಣಿ ಸಂಖ್ಯೆಯನ್ನ ಮೆಟ್ರೋ ಟಿಕೆಟ್ ಕೌಂಟರ್ ನಲ್ಲಿ ತಿಳಿಸಬೇಕು.

NCMC ಕಾರ್ಡ್ RBL ಬ್ಯಾಂಕ್ ನ ಎಲ್ಲ ಶಾಖೆಗಳಲ್ಲೂ ಲಭ್ಯವಾಗಲಿದೆ. ಹಾಗೂ ಕಾರ್ಡ್ ಪಡೆದುಕೊಳ್ಳಲು ತಾಂತ್ರಿಕ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು BMRCL ತಿಳಿಸಿದೆ.

Share This Article
Leave a comment