ರಕ್ತ ಚಂದನ ಸ್ಮಗ್ಲಿಂಗ್ ಕೇಸ್; ಮೂವರು ನಗರ ಪೊಲೀಸ್​​​​ ಪೇದೆಗಳಿಗಾಗಿ ಹುಡುಕಾಟ

Team Newsnap
1 Min Read

ಖಾಕಿಯೇ ಖಾಕಿಗೆ ಖೆಡ್ಡಾ ತೋಡಿದ್ದಾರೆ ಬೆಂಗಳೂರು ಗ್ರಾಮಂತರ ಪೊಲೀಸರೇ ಇಲ್ಲಿ ಹೀರೋಗಳು. ವಿಲನ್ ಸ್ಥಾನದಲ್ಲಿ ನಿಂತವರೂ ಪೊಲೀಸರೇ. ವಿಚಿತ್ರ ಪ್ರಕರಣವೊಂದು ಬೆಂಗಳೂರಿನಲ್ಲಿ ಬಯಲಿಗೆ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮದಲ್ಲಿ ಬೆಂಗಳೂರು ನಗರದ ಮೂವರು ಪೊಲೀಸ್​ ಪೇದೆಗಳು
ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.

ಬೆಂಗಳೂರು ಗ್ರಾಮಾಂತರ ಪೊಲೀಸರು ರಕ್ತ ಚಂದನ ಸ್ಮಗ್ಲರ್ ಒಬ್ಬನನ್ನು ಬಂಧಿಸಿ ವಿಚಾರಣೆ ನಡೆಸುವ ವೇಳೆಯಲ್ಲಿ
ರೋಚಕ ಸತ್ಯವೊಂದು ಬೆಳಕಿಗೆ ಬಂದಿದೆ, ಈ ರಕ್ತ ಚಂದನ ಸ್ಮಗ್ಲಿಂಗ್​ನಲ್ಲಿ ಮೂವರು ಪೊಲೀಸರೇ ಪ್ರಮುಖ ಆರೋಪಿಗಳಾಗಿದ್ದಾರೆ.

ಈಗ ಒಬ್ಬ ಡಿವೈಎಸ್ಪಿ ಮಟ್ಟದ ಅಧಿಕಾರಿ ನೇತೃತ್ವದ ತಂಡದಿಂದ ಆರೋಪಿ ಪೊಲೀಸ್​ ಕಾನ್ಸ್​​ಟೇಬಲ್​ಗಳಿಗಾಗಿ ತೀವ್ರ ಹುಡುಕಾಟ​ ನಡೆಯುತ್ತಿದೆ.

ಇವರ ಹಿಂದೆ ಯಾರಾದರೂ ಹಿರಿಯ ಅಧಿಕಾರಿಗಳು ಇದ್ದಾರಾ? ಅನ್ನೋ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಇನ್ನು  ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ರಕ್ತಚಂದನ ಅಕ್ರಮ ಮಾರಾಟ ಮಾಡಿರುವ ಶಂಕೆಯೂ ಇದೆ.

Share This Article
Leave a comment