ರಾಜ್ಯದ ಇಬ್ಬರು ನಾಯಕರಿಗೆ ಬಿಜೆಪಿಯಲ್ಲಿ ಉನ್ನತ ಹುದ್ದೆ

Team Newsnap
1 Min Read

ಸಂಸದ ತೇಜಸ್ವಿ ಸೂರ್ಯ ಅವರನ್ನು ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಗಿ ಹಾಗೂ ಸಚಿವ ಸಿ‌.ಟಿ.ರವಿ‌ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡಿ ಬಿಜೆಪಿ ಅಧ್ಯಕ್ಷ ಜಿ ಪಿ ನಡ್ಡಾ ಆದೇಶ ಮಾಡಿದ್ದಾರೆ.
ರಾಜ್ಯದ ಇಬ್ಬರು ನಾಯಕರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ನೀಡುವುದರ ಮೂಲಕ ಬಿಜೆಪಿ‌ ಪಕ್ಷದಲ್ಲಿ ಸ್ಥಾನ ಬದಲಾವಣೆ ಕಾರ್ಯ ಇಂದು ನಡೆದಿದೆ. ಈ ಮೊದಲು ಇದ್ದವರಲ್ಲಿ‌ ಕೆಲವರನ್ನು ಉಳಿಸಿಕೊಂಡು ಇನ್ನು ಕೆಲವರನ್ನು ತೆಗೆದು ಹಾಕಲಾಗಿದೆ.

ಬಿಜೆಪಿಯ ಹೊಸ ತಂಡಕ್ಕೆ 8 ಸ್ಥಾನಗಳಿಗೆ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೆಸರುಗಳನ್ನು ಸೂಚಿಸಿದ್ದಾರೆ.

ಎಂಟು ಜನ ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಹಳೆಯ ಮುಖಗಳಾದ ಭೂಪೇಂದರ್ ಯಾದವ್, ಅರುಣ್ ಸಿಂಗ್‌ ಹಾಗೂ ಕೈಲಾಶ್ ವಿಜಯವರ್ಗೀಯ ಅವರನ್ನು ಉಳಿಸಿಕೊಂಡು‌ ಹೊಸ ಕಾರ್ಯದರ್ಶಿಗಳನ್ನಾಗಿ ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ದುಶ್ಯಂತ್ ಕುಮಾರ್ ಗೌತಮ್, ಡಿ.ಪುರಂದೇಶ್ವರಿ, ತರುಣ್ ಚುಗ್, ದಿಲೀಪ್ ಸೈಕೀಯಾ ಅವರನ್ನು ನೇಮಿಸಿದೆ.

ಹಳೆಯ ಮುಖಗಳಾದ ರಾಮ್ ಮಾಧವ್, ಪಿ ಮುರಳೀಧರ್ ರಾವ್, ಸರೋಜ್ ಪಾಂಡೆ ಮತ್ತು ಅನಿಲ್ ಜೈನ್ ಅವರನ್ನು ಕೈ ಬಿಟ್ಟಿದೆ.

ಸಂಸತ್ ನಲ್ಲಿ‌ ಉತ್ತಮ ವಾಗ್ಮಿ ಎನಿಸಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ರಾಗಿ ನೇಮಕ ಮಾಡಿರುವುದು ರಾಜ್ಯದ ಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ.

Share This Article
Leave a comment