ಮೈಸೂರು ಮೇಯರ್ ಉಪ ಮೇಯರ್ ಸ್ಥಾನಗಳು ಬಿಜೆಪಿಗೆ ದಕ್ಕಿವೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಕುತೂಹಲಕಾರಿ ಬೆಳವಣಿಗೆಗಳಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಮೇಯರ್ ಆಗಿ ಹಾಗೂ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೂ ಜೆಡಿಎಸ್ಗೆ ಉಪಮೇಯರ್ ವಿಚಾರದಲ್ಲಿ ತೀವ್ರ ಮುಖಭಂಗ ಆಗಿದೆ. ಉಪ ಮೇಯರ್ ಸ್ಥಾನವೂ ಕೂಡ ಬಿಜೆಪಿಗೆ ಸಿಕ್ಕಿದೆ.
ಜೆಡಿಎಸ್ನಿಂದ ಬೆಂಬಲ ಸಿಕ್ಕಿದ್ದರಿಂದ ಎರಡನೇ ಬಾರಿಗೆ ಬಿಜೆಪಿಗೆ ಮೇಯರ್ ಪಟ್ಟ ಸಿಕ್ಕಿದೆ. ಜೆಡಿಎಸ್ ಸದಸ್ಯೆ ನಿರ್ಮಲಾ ಹರೀಶ್ ಕ್ರಾಸ್ ವೋಟಿಂಗ್ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಪರ ಜೆಡಿಎಸ್ ಸದಸ್ಯೆ ವೋಟಿಂಗ್ ಮಾಡಿದರು. ಸಯ್ಯದ್ ಹಸ್ರತ್ ವುಲ್ಲಾಗೆ ಕಾಂಗ್ರೆಸ್ನಿಂದ 26 ವೋಟ್ಗಳು ಹಾಗೂ ಬಿಎಸ್ ಪಿ ಮತ್ತು ಜೆಡಿಎಸ್ನಿಂದ ತಲಾ ಒಂದು ಮತಗಳು ಸಿಕ್ಕಿವೆ.
ಸೆ.28 ರಿಂದ ಶ್ರೀರಂಗಪಟ್ಟಣದಲ್ಲಿ ವಿಜೃಂಭಣೆಯ ದಸರಾ ಆಚರಣೆ: DC ಅಶ್ವತಿ
ಉಪಮೇಯರ್ ಸ್ಥಾನಕ್ಕೆ ಅರ್ಜಿ ಹಾಕಿದ್ದ ಜೆಡಿಎಸ್ನ ರೇಷ್ಮಾಭಾನು ಅರ್ಜಿ ತಿರಸ್ಕೃತವಾಗಿದೆ. ನಾಮಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಉಪಮೇಯರ್ ಸ್ಥಾನವನ್ನು ಜೆಡಿಎಸ್ ಕಳೆದುಕೊಂಡಿದೆ. ಮಾತ್ರವಲ್ಲ, ಬಿಜೆಪಿಗೇ ಉಪಮೇಯರ್ ಪಟ್ಟ ದಕ್ಕಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ಉಪಮೇಯರ್ ಸ್ಥಾನ ಸಿಗದಿರುವುದಕ್ಕೆ ಜೆಡಿಎಸ್ಗೆ ಭಾರೀ ಮುಖಭಂಗವಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು