ಬಿಜೆಪಿ ಹೈಕಮಾಂಡ್ ಇದೀಗ ರಾಜ್ಯವಾರು ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಬಿಜೆಪಿ ಹೈಕಮಾಂಡ್ ರಾಜ್ಯಾವಾರು ಉಸ್ತುವಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ ಉಸ್ತುವಾರಿಯಾಗಿ ಸಂಸದ ಡಾ.ರಾಧ ಮೋಹನ್ ದಾಸ್ ಅಗ್ರವಾಲ್ ಮತ್ತು ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಅವರನ್ನ ನೇಮಕ ಮಾಡಿದೆ. ಕೇರಳಕ್ಕೆ ಪ್ರಕಾಶ್ ಜಾವ್ಡೇಕರ್, ಪುದುಚೇರಿಗೆ ನಿರ್ಮಲ್ ಕುಮಾರ್ ಸುರಾನ, ಬೈಜಯಂತ್ ಪಾಂಡಾ ಉತ್ತರ ಪ್ರದೇಶದ ನೂತನ ಉಸ್ತುವಾರಿಯಾಗಲಿದ್ದಾರೆ. ಬಿಹಾರದ ಚುನಾವಣಾ ಉಸ್ತುವಾರಿಯಾಗಿ ವಿನೋದ್ ತಾವ್ಡೆ ನೇಮಕ ಅವರನ್ನು ನೇಮಕ ಮಾಡಲಾಗಿದೆ.
ವಿಜಯಪಾಲ್ ತೋಮರ್ ಅವರನ್ನು ಒಡಿಶಾ ಹಾಗೂ ಶ್ರೀಕಾಂತ್ ಶರ್ಮಾ ಅವರನ್ನು ಹಿಮಾಚಲದ ಉಸ್ತುವಾರಿಯನ್ನಾಗಿ ಮಾಡಲಾಗಿದೆ.
ಜಮ್ಮು-ಕಾಶ್ಮೀರದ ಉಸ್ತುವಾರಿಯಾಗಿ ತರುಣ್ ಚುಗ್ ಹಾಗೂ ಆಶಿಶ್ ಸೂದ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗೆ ಒಟ್ಟು 23 ಮಂದಿಯನ್ನು ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು