ರಾಯಚೂರಿನಿಂದ ಸಿಎಂ ಬೊಮ್ಮಾಯಿ, BSY ನೇತೃತ್ವದಲ್ಲಿ ಬಿಜೆಪಿಯ ಜನ ಸಂಕಲ್ಪ ಯಾತ್ರೆ ಆರಂಭ

Team Newsnap
1 Min Read

ರಾಜ್ಯದಲ್ಲಿ ಕಾಂಗ್ರೆಸ್​ ಭಾರತ್ ಜೋಡೋ ಯಾತ್ರೆಯು ಕಮಲ ಕಲಿಗಳಲ್ಲಿ ಕಂಪನ ಸೃಷ್ಟಿಸಿದೆ. ಪೋಸ್ಟರ್ ವಾರ್​ಗೆ ಪೋಸ್ಟರ್ ಮೂಲಕವೇ ಟಾಂಗ್ ಕೊಟ್ಟಿದ್ದ ಬಿಜೆಪಿ ಈಗ ಜೋಡೋ ಯಾತ್ರೆಗೆ ಪರ್ಯಾಯವಾಗಿ ಯಾತ್ರೆ ಮೂಲಕವೇ ಟಕ್ಕರ್ ಕೊಡಲು ಪ್ಲಾನ್ ಮಾಡಿ ರಣಕಹಳೆ ಮೊಳಗಿಸಿದೆ.

ಇದನ್ನು ಓದಿ –ಹಾವೇರಿಯ 86 `ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ‘ ಮತ್ತೆ ಮುಂದೂಡಿಕೆ

ಬಿಜೆಪಿ ಸಂಕಲ್ಪ ಯಾತ್ರೆಗೆ ಕಹಳೆ ಮೊಳಗಲಿದೆ. SC, ST ಮೀಸಲಾತಿ ಘೋಷಣೆ ಬಳಿಕ ಭಾರೀ ಮೆಚ್ಚುಗೆಗೆ ಪಾತ್ರವಾಗಿರುವ ಸಿಎಂ ಬೊಮ್ಮಾಯಿ ನಾಳೆ ಹೊಸ ಯಾತ್ರೆ ಕೈಗೊಳ್ಳಲಿದ್ದಾರೆ.

ರಾಯಚೂರಿನಿಂದ ಬಿಜೆಪಿಯ ಜನ ಸಂಕಲ್ಪ ಯಾತ್ರೆ ಆರಂಭವಾಗಲಿದೆ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್​ವೈ ನೇತೃತ್ವದಲ್ಲಿ ಯಾತ್ರೆ ನಡೆಯಲಿದೆ. ಹಿಂದೆಯೂ ಕೂಡ ರಾಯಚೂರಿನಿಂದ ಪಾದಯಾತ್ರೆ ಮಾಡಿದ್ದು ಆಗ ಸರ್ಕಾರ ಮಾಡಲು ಸಾಧ್ಯವಾಗಿತ್ತು. ಹೀಗಾಗಿ ಮತ್ತದೇ ರಾಯಚೂರಿನ ಗಿಲ್ಲೇಸೂಗೂರು ಗ್ರಾಮದಿಂದ ಬಿಜೆಪಿಯ ಜನಸಂಕಲ್ಪ ಯಾತ್ರೆ ಶುರುವಾಗಲಿದೆ ಈ ಈಗ ಗ್ರಾಮದಲ್ಲಿ ಬೃಹತ್ ವೇದಿಕೆ ಸಜ್ಜಾಗುತ್ತಿದೆ.

ಯಾತ್ರೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆ ಇದೆ. ಇದೇ ವೇಳೆ ಸಿಎಂ ಬೊಮ್ಮಾಯಿಗೆ ಸನ್ಮಾನ ಮಾಡಲು ಕೂಡ ಸಿದ್ಧತೆ ಜೋರಾಗಿದೆ. ಈ ಮೂಲಕ ಮುಂಬರುವ ವಿಧಾನಸಭೆ ಸಮರಕ್ಕೆ ಮತಬೇಟೆಗೆ ಮುಂದಾಗಿದೆ.

Share This Article
Leave a comment