ಕಾಂಗ್ರೆಸ್‌ ಅಧಿಕಾರ : ಅಪಾಯದಲ್ಲಿ ಬಿಜೆಪಿ ಕಾರ್ಯಕರ್ತರು – ಪ್ರತಾಪ್‌ ಸಿಂಹ

Team Newsnap
1 Min Read

ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರತಾಪ್‌ ಸಿಂಹ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಮೇಲೆ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಉತ್ಸಾಹ ಜಾಸ್ತಿಯಾಗಿ, ನಮ್ಮ ಕಾರ್ಯಕರ್ತರನ್ನ ಟಾರ್ಗೆಟ್‌ ಮಾಡುತ್ತಿದ್ದಾರೆ, ಇದರಿಂದ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಅದ್ಭುತ ಕೆಲಸಗಳನ್ನ ಮಾಡಿದೆ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿಯೂ ಸರ್ಕಾರ ಉತ್ತಮ ಸೇವೆ ನೀಡಿದೆ.ಇದೆಲ್ಲವನ್ನು ನಾವು ಜನರಿಗೆ ತಿಳಿಸುವಲ್ಲಿ ವಿಫಲರಾಗಿದ್ದೇವೆ ಎಂದು ಪ್ರತಾಪ್‌ ಸಿಂಹ ಬೆಸರಗೊಂಡರು.

ಗ್ಯಾರಂಟಿ ಯೋಜನೆ ನೋಡಿದ ಕೂಡಲೇ ಜನರು ಗ್ಯಾರಂಟಿ ಕೊಟ್ಟೇ ಬಿಟ್ರು ಅಂತಾ ವೋಟ್‌ ಹಾಕಿದ್ದಾರೆ. ಗ್ಯಾರಂಟಿಗಳ ಪರ ನಾನು ಇದ್ದೇನೆ. ಆದರೆ ಅರ್ಥವ್ಯವಸ್ಥೆಗೆ ಹೊಡೆತ ಬೀಳದಂತೆ ನೋಡಿಕೊಳ್ಳಬೇಕು ಅಷ್ಟೇ ಎಂದು ಮನವಿ ಮಾಡಿದ್ದಾರೆ.

ಬಿಜೆಪಿಯಿಂದ ಉಚಿತ ಬಸ್‌ ಪಾಸ್‌ ಸೇವೆ , ಪ್ರಧಾನ ಮಂತ್ರಿ ಅನ್ನ ಕಲ್ಯಾಣ ಯೋಜನೆ ಮಾಡಿದ್ವಿ, ಅವುಗಳನ್ನ ಜಾರಿ ಮಾಡಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ.ಯಶಸ್ವಿನಿ ಯೋಜನೆ ದರ ಹೆಚ್ಚಳಕ್ಕೆ ಖಾಸಗಿ ಆಸ್ಪತ್ರೆಗಳಿಂದ ಚಿಂತನೆ

ಕಾಂಗ್ರೆಸ್‌ ಗೆದ್ದಿದೆ ಅಂದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಯಿತು, ಇದೇ ಶಾಶ್ವತ ಎಂದಲ್ಲ. ಪ್ರತೀ ಚುನಾವಣೆಯಲ್ಲೂ ಫಲಿತಾಂಶ ಬದಲಾಗುತ್ತೆ. ಮೀಸಲಾತಿ ನೀಡಿ ಒಳ್ಳೆ ಕೆಲಸ ಮಾಡಿದ್ದರೂ ನಾವು ಮನವರಿಕೆ ಮಡಿಕೊಳ್ಳುವುದರಲ್ಲಿ ವಿಫಲರಾಗಿದ್ದೇವೆ ಎಂದರು.

Share This Article
Leave a comment