November 13, 2024

Newsnap Kannada

The World at your finger tips!

election,BJP,Politics

BJP ticket announcement - High command shock to Vijayendra

ಉತ್ತರ ಪ್ರದೇಶ, ಉತ್ತರಾಖಂಡ್‌ನಲ್ಲಿ ಬಿಜೆಪಿ – ಪಂಜಾಬ್ ನಲ್ಲಿ ಆಪ್ ಅಧಿಕಾರಕ್ಕೆ ?

Spread the love

ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ ನಲ್ಲಿ ಬಿಜೆಪಿ ಬಹುಮತ ಮೂಲಕ ಜಯಗಳಿಸಲಿದೆ ಎಂದು ಟೈಮ್ಸ್‌ ನೌ ಸಮೀಕ್ಷೆ ಹೇಳಿದೆ.

ಈ ಬಾರಿ ಯಾವ ರಾಜ್ಯದಲ್ಲಿ ಯಾರು ಜಯಗಳಿಸಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಹೀಗಾಗಿ ಟೈಮ್ಸ್‌ ನೌ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ , ಉತ್ತರಾಖಂಡ್‌, ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹಮತ ಪಡೆಯಲಿದೆಯಂತೆ.

ಗೋವಾ, ಮಣಿಪುರದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ಭವಿಷ್ಯ ನುಡಿಯಲಾಗಿದೆ.

ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟು ಸ್ಥಾನ :

ಉತ್ತರ ಪ್ರದೇಶ:
ಒಟ್ಟು 403 ಸ್ಥಾನ .
ಬಹುಮತಕ್ಕೆ 202 ಅಗತ್ಯವಿದೆ. ಬಿಜೆಪಿ 227-254, ಎಸ್‌ಪಿ 136-151, ಬಿಎಸ್‌ಪಿ 08-18, ಕಾಂಗ್ರೆಸ್‌ 6-11 ಸ್ಥಾನಗಳನ್ನು ಗಳಿಸಬಹುದು.

ಉತ್ತರಾಖಂಡ:
ಒಟ್ಟು 70 ವಿಧಾನಸಭಾ ಸ್ಥಾನ

ಬಹುಮತಕ್ಕೆ 36 ಸ್ಥಾನಗಳು ಅಗತ್ಯ

ಬಿಜೆಪಿ 44-50, ಕಾಂಗ್ರೆಸ್‌ 12-15, ಆಪ್‌ 5-8, ಇತರೇ 0-2 ಸ್ಥಾನಗಳಲ್ಲಿ ಜಯಗಳಿಸಬಹುದು.

ಪಂಜಾಬ್‌:
ಒಟ್ಟು 117 ಕ್ಷೇತ್ರಗಳು

ಬಹುಮತಕ್ಕೆ 59 ಸ್ಥಾನ ಅಗತ್ಯ

ಆಪ್‌ 54-58, ಕಾಂಗ್ರೆಸ್‌ 44-47, ಶಿರೋಮಣಿ ಅಖಾಲಿ ದಳ 11-15, ಬಿಜೆಪಿ 1-3 ಕ್ಷೇತ್ರಗಳನ್ನು ಗೆಲ್ಲಬಹುದು.

ಗೋವಾ:
ಒಟ್ಟು 40 ಕ್ಷೇತ್ರಗಳು

ಗೋವಾದಲ್ಲಿ ಬಹುಮತಕ್ಕೆ 21 ಸ್ಥಾನಗಳ ಅಗತ್ಯ

ಬಿಜೆಪಿ 17-21, ಆಪ್‌ 08-11, ಕಾಂಗ್ರೆಸ್‌ 4-6 ಗಳಿಸಬಹುದು.

ಮಣಿಪುರ:
ಒಟ್ಟು 60 ಸ್ಥಾನ

ಬಹುಮತಕ್ಕೆ 31 ಸ್ಥಾನಗಳನ್ನು ಗೆಲ್ಲಬೇಕು.

ಬಿಜೆಪಿ 23-27, ಕಾಂಗ್ರೆಸ್‌ 22-27, ಎನ್‌ಸಿಎಫ್‌ 02-06, ಇತರರು 05-09 ಕ್ಷೇತ್ರಗಳಲ್ಲಿ ಜಯಗಳಿಸಬಹುದು.

Copyright © All rights reserved Newsnap | Newsever by AF themes.
error: Content is protected !!