ಮಂಡ್ಯದಲ್ಲಿ ಬಿಜೆಪಿ ಯುವ ಪಡೆಯ ಹೊಸ ಪರ್ವ ಆರಂಭ : ಲೆಕ್ಕಕ್ಕೆ ಸಿಗದ ಲಾಭ – ನಷ್ಟಗಳು

Team Newsnap
2 Min Read

ಒಂದು ಮಾತಿದೆ. ಬದಲಾವಣೆ ಎನ್ನುವುದು ಹರಿಯವ ನೀರಿನಂತೆ ಇರಬೇಕು. ನಿಂತ ನೀರು ಮಲಿನತೆ ಸಂಕೇತವಾಗಲಿದೆ. ಅದು ಜೀವನ ಮತ್ತು ಎಲ್ಲಾ ಕ್ಷೇತ್ರಕ್ಕೂ ಅನ್ವಯವಾಗಲಿದೆ.

ಮಂಡ್ಯದಲ್ಲಿ ಈಗ ಬಿಜೆಪಿಗೆ ಸೇರಲು ಯುವಪಡೆ ಮುಂದಾಗಿದೆ. ಇದು ಯುವ ಪಡೆ ಕಟ್ಟುವ ಬಿಜೆಪಿ ಸಂಕಲ್ಪದ ಒಂದು ಭಾಗ. ಇಂತಹ ಸೇರ್ಪಡೆಗಳಿಂದ ಹೊಸ ಮುಖಗಳಿಗೆ ಅವಕಾಶವೂ ಅಗುತ್ತದೆ. ಪಕ್ಷ ಹೊಸ ದಿಕ್ಕಿನಲ್ಲಿ ನಡೆಯಲು ಅನುವೂ ಅಗಲಿದೆ.

ಮುಖ್ಯ ಮಂತ್ರಿ ಬೊಮ್ಮಾಯಿ ಹೇಳಿಕೆಯಂತೆ ಮಂಡ್ಯ ಮತ್ತು ಕೋಲಾರದಲ್ಲಿ ಬಿಜೆಪಿಯ ಹೊಸ ಶೆಕೆ ಆರಂಭವಾಗಲಿದೆ. ಲಕ್ಷ್ಮೀ ಅಶ್ವಿನ್ ಗೌಡ, ಅಶೋಕ್ ಜಯರಾಂ , ಇಂಡುವಾಳ ಸಚ್ಚಿ ಸೇರಿದಂತೆ ಮಂಡ್ಯ ಅನೇಕ ಯುವಕರು ಹಾಗೂ ಕೋಲಾರದಿಂದ ವರ್ತೂರು ಪ್ರಕಾಶ್ , ಮಂಜುನಾಥ್ ಗೌಡ ಅವರುಗಳು ಬಿಜೆಪಿ ಸೇರಲು
ಹೈ ಕಮ್ಯಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಅದೇ ರೀತಿ ಇಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಈ ಎಲ್ಲಾ ಯುವ ಪಡೆ ಬಿಪಿಪಿಯಿಂದ ರಾಜಕೀಯದ ಹೊಸ ಪರ್ವ ಆರಂಭ ಮಾಡಲಿದ್ದಾರೆ.

ಸುಮಲತಾ ಎಂಟ್ರಿಗೆ ಇದೊಂದು ಹೆಜ್ಜೆ

ಸಂಸದ ಸುಮಲತಾ ಬಿಜೆಪಿ ಸೇರ್ಪಡೆ ಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ . ಅದೇ ರೀತಿ ಬಿಜೆಪಿ ನಾಯಕರೂ ಕೂಡ ಸುಮಲತಾ ಅವರನ್ನು ಸೇರಿಸಿಕಂಡು ಪಕ್ಷಕ್ಕೆ ಲಾಭ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಆದರೆ ಸಂಸದೆ ಮತ್ತು ಬಿಜೆಪಿ ನಾಯಕರು ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಗೌಪ್ಯತೆ ಕಾಪಾಡಿದ್ದಾರೆ. ಆದರೆ ಒಂದಂತೂ ಸತ್ಯ. ಸುಮಲತಾ ಬಿಜೆಪಿ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆ ನಿಟ್ಟಿನಲ್ಲಿ ಅವಕಾಶಗಳನ್ನು ಕಾಯುತ್ತಿದ್ದಾರೆ ಎನ್ನುವುದು ಅಕ್ಷರಶಃ ಸತ್ಯ.

ಮಂಡ್ಯದಲ್ಲಿ ಯುವ ಪಡೆಯ ಒಂದು ತಂಡ ಬಿಜೆಪಿಗೆ ಎಷ್ಟರ ಲಾಭವಾಗುತ್ತದೆ ಎನ್ನುವ ವಿಶ್ಲೇಷಣೆಗಳು ಆರಂಭವಾಗಿವೆ. ಕಳೆದ ನಾಲ್ಕು ದಶಕಗಳಿಂದ ಬಿಜೆಪಿ ಕಟ್ಟಿದ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಹೊಸ ನೀರು ಬಂದಾಗ ಹಳೇ ನೀರು ಕೊಚ್ಚಿ ಹೋಗುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ಬಿಜೆಪಿ ಹೈ ಕಮ್ಯಾಂಡ್ ಇಬ್ನರೂ ನಿಭಾಯಿಸುವ ಅನಿವಾರ್ಯತೆ ಎದುರಾಗುತ್ತದೆ.

ಈಗ ಬಿಜೆಪಿ ಸೇರುವ ಈ ಯುವ ಪಡೆ ಬಿಜೆಪಿ ತತ್ವ ಸಿದ್ದಾಂತ ದಂತೆ ನಡೆದು ತೋರಿಸುವ ಮತ್ತು ಅಧಿಕಾರ ಬಯಸದೇ ಪಕ್ಷ ಕಟ್ಟುತ್ತೇವೆ ಎಂಬ ಸಂಕಲ್ಪ ಮಾಡಿಕೊಂಡು ಸೇರುತ್ತಿಲ್ಲ ಎಂಬುದಂತೂ ಸ್ಪಷ್ಟ. ತಮ್ಮ ಮಾತೃ ಪಕ್ಷದಲ್ಲಿ ಸಿಗದ ಮಾನ್ಯತೆ , ನಿರ್ಲಕ್ಷ್ಯದ ಧೋರಣೆ ವಿರೋಧಿಸಿ ಬಿಜೆಪಿ ಕದ ತಟ್ಟುವವರ ಸಂಖ್ಯೆ ಹೆಚ್ಚಾಗುತ್ತದೆ . ಅಲ್ಲದೇ ಬಿಜೆಪಿಯಲ್ಲಿ ಅಧಿಕಾರದ ಕನಸು, M LA ಆಗಬೇಕು ಎಂಬ ಆಸೆ ಹೊತ್ತವರೂ ಇದ್ದಾರೆ. ಅದು ತಪ್ಪು ಎಂದು ಹೇಳಲಾಗುವುದಿಲ್ಲ. ಅವರವರ ಫೇಸ್ ವ್ಯಾಲೂ ಮೇಲೆ ಜನರು ನೀಡುವ ಮನ್ನಣೆ , ಆದ್ಯತೆಗಳು ಈ ಯುವ ಪಡೆಗೆ ಬೆಲೆ ಇದ್ದೆ ಇದೆ. ಚುನಾವಣೆ ವರ್ಷದಲ್ಲಿ ಇಂಹತ ಸೇರ್ಪಡೆಗಳಿಂದ ಎಷ್ಟು ಲಾಭವಾಗುತ್ತದೆ ಎನ್ನುವುದನ್ನು ಈಗಲೇ ಹೇಳಲಾಗದು . ಜಿಲ್ಲೆಯಲ್ಲಿ ಈಗಷ್ಟೇ ಪಕ್ಷಾಂತರ ಪರ್ವ ಆರಂಭವಾಗಿದೆ. ಇದು ಅಂತ್ಯವಲ್ಲ. ಆರಂಭ. ಮುಂದಿನ ದಿನಗಳಲ್ಲಿ ಆಗುವ ಬದಲಾವಣೆಗಳನ್ನು ಅರಗಿಸಿಕೊಳ್ಳಬೇಕಿದೆ.

Share This Article
Leave a comment