ಪಶ್ಚಿಮ ಬಂಗಾಳದಲ್ಲಿ ನಿನ್ನೆ ಸಂಜೆ ಪೋಲೀಸ್ ಠಾಣೆಯ ಎದುರೇ ಸ್ಥಳೀಯ ಬಿಜೆಪಿ ಮುಖಂಡ, ಕೌನ್ಸಿಲರ್ ಮನೀಶ್ ಶುಕ್ಲಾ ಹತ್ಯೆ ಮಾಡಲಾಗಿದೆ.
ಪಶ್ಚಿಮ ಬಂಗಾಳದ ತಿತಗರ್ ಸಮೀಪ ಉತ್ತರ 24 ಪರ್ಗನಾಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಾಯಂಕಾಲ ಬೈಕ್ ಮೇಲೆ ಬಂದ ಇಬ್ಬರು ವ್ಯಕ್ತಿಗಳು ಮನೀಶ್ ಅವರಿಗೆ ಗುಂಡು ಹಾರಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಿತಲಾದರೂ ಅವರು ಬದುಕುಳಿಯಲಿಲ್ಲ.
ಘಟನೆಗೆ ತೃಣ ಮೂಲ ಕಾಂಗ್ರೆಸ್ ಜೊತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ ನೇರ ಕಾರಣ. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.
ಬಿಜೆಪಿ ಮುಖಂಡನ ಹತ್ಯೆಯ ಕುರಿತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯಾ , ‘ಘಟನೆಯಲ್ಲಿ ಟಿಎಂಸಿಯ ಕೈವಾಡವಿದೆ. ನಮಗೆ ಪೋಲೀಸ್ ತನಿಖೆ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಶ್ಚಿಮಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಡಿಜಿಪಿಯವರಿಗೆ ಹತ್ಯೆಯ ಬಗೆಗಿನ ಮತ್ತು ರಾಜ್ಯದಲ್ಲಿನಕಾನೂನು ಸುವ್ಯವಸ್ಥೆಯ ಬಗೆಗಿನ ವಿವರಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಈ ಮಧ್ಯೆ ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಇಂದು ಮಧ್ಯಾಹ್ನ 12 ಗಂಟೆಯಿಂದ ಬಂದ್‌ಗೆ ಕರೆ ನೀಡಿದೆ.
More Stories
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ
ಒಂದು ದೇಶ, ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ