ಅಹ್ಮದಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಪ್ರಧಾನಿ ಅಣ್ಣನ ಮಗಳಿಗೂ ಟಿಕೆಟ್​ ಕೊಡದ ಬಿಜೆಪಿ

Team Newsnap
1 Min Read

ಅಹ್ಮದಾಬಾದ್​ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದ ಪ್ರಧಾನಿ ಮೋದಿ ಅಣ್ಣನ ಮಗಳು ಸೋನಾಲ್ ಮೋದಿ​​ಗೂ ಬಿಜೆಪಿ ಟಿಕೆಟ್ ನೀಡಲು ನಿರಾಕರಣೆ ಮಾಡಿದೆ.

ಹೊಸ ನಿಯಮದಂತೆ ಬಿಜೆಪಿಯಿಂದ ಟಿಕೆಟ್​ ಗಿಟ್ಟಿಸಿಕೊಳ್ಳಲು ಸೋನಾಲಿ ವಿಫಲರಾಗಿದ್ದಾರೆ

ಫೆ 28 ರಂದು ಚುನಾವಣೆ:

ಗುಜರಾತ್​ನ 81 ಮಹಾನಗರ ಪಾಲಿಕೆಗೆ, 31 ಜಿಲ್ಲಾ ಪಂಚಾಯತ್​​ಗೆ, 231 ತಾಲೂಕು ಪಂಚಾಯತ್​​ಗೆ ಫೆಬ್ರವರಿ 28 ರಂದು ಚುನಾವಣೆ ನಡೆಯಲಿದೆ.

ಬಿಜೆಪಿ ಅಹ್ಮದಾಬಾದ್ ಮುನ್ಸಿಪಾಲ್​ ಕಾರ್ಪೊರೇಷನ್​​ (AMC) ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ಸೋನಾಲ್ ಮೋದಿ ಅವರು ಹೆಸರು ಇಲ್ಲ. ಸೋನಾಲ್ ಅವರ ಬೋದಕ್ ದೇವ್ ವಾರ್ಡ್​​ನಿಂದ ಸ್ಪರ್ಧಿಸಲು ನಿರ್ಧರಿಸಿದ್ದರು.

ಅಭ್ಯರ್ಥಿಗಳಿಗೆ ಹೊಸ ನಿಯಮಗಳನ್ನು ವಿಧಿಸಲಾಗಿದ್ದು, ಈ ನಿಯಮದ ಪ್ರಕಾರ ಸೋನಾಲ್ ಮೋದಿಗೆ ಟಿಕೆಟ್ ಸಿಗಲಿಲ್ಲ ಅಂತಾ ಹೇಳಲಾಗಿದೆ.

30 ವರ್ಷದ ಸೋನಾಲ್ ಮೋದಿ ಗೃಹಿಣಿಯಾಗಿದ್ದಾರೆ. ಇವರು ಪ್ರಧಾನಿ ಮೋದಿಯ ಸಹೋದರ ಪ್ರಹ್ಲಾದ್ ಮೋದಿ ಮಗಳು. ಅಹ್ಮದಾಬಾದ್ ನಗರದಲ್ಲಿ ನ್ಯಾಯಬೆಲೆ ಅಂಗಡಿ ಹೊಂದಿದ್ದಾರೆ. ಅಲ್ಲದೇ ಗುಜರಾತ್ ಫೇರ್​ ಪ್ರೈಸ್ ಶಾಪ್ ಅಸೋಸಿಯೇಷನ್​​ನ ಅಧ್ಯಕ್ಷರು ಕೂಡ ಆಗಿದ್ದಾರೆ.

ನಾನು ಪ್ರಧಾನಿ ಮೋದಿ ಅಣ್ಣನ ಮಗಳಾಗಿ ಚುನಾವಣೆಗೆ ನಿಲ್ಲಲು ಇಷ್ಟಪಡುವುದಿಲ್ಲ. ಬದಲಾಗಿ ಬಿಜೆಪಿ ಕಾರ್ಯಕರ್ತರಾಗಿ ನಾನು ಚುನಾವಣೆ ಅಖಾಡಕ್ಕೆ ಇಳಿಯಲು ಇಷ್ಟಪಡುತ್ತೇನೆ ಅಂತಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬೆನ್ನಲ್ಲೇ ಟಿಕೆಟ್ ನಿರಾಕರಣೆ ಮಾಡಲಾಗಿದೆ.

saraswathi
Share This Article
Leave a comment