ಸಚಿವರ ಪುತ್ರ ನಿಶಾಂತ್ ನಿಗೆ ಬ್ಲ್ಯಾಕ್ ಮೇಲ್ ಮಾಡಿ ಬಂಧನ ದಲ್ಲಿರುವ ಜ್ಯೋತಿಷಿ ಚಂದ್ರಶೇಖರ್ ಸ್ವಾಮೀಜಿ ಪುತ್ರ ರಾಹುಲ್ ಭಟ್ ವಿಚಾರಣೆ ವೇಳೆ ಸಾಕಷ್ಟು ಟ್ವಿಸ್ಟ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾನೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಸೋಮಶೇಖರ್ ವಿರುದ್ಧ ನಕಲಿ ವಿಡಿಯೋ ಒಂದನ್ನು ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಪ್ರಕರಣ ಐವರನ್ನು ಬಂಧಿಸಲಾಗಿದೆ.
ಆಡುಗೋಡಿಯ ಸೈಬರ್ ಕ್ರೈಂ ಪೊಲೀಸರ ಮಾಹಿತಿಯಂತೆ ಈ ಪ್ರಕರಣದಲ್ಲಿ ಜ್ಯೋತಿಷಿ ಚಂದ್ರಶೇಖರ್ ಸ್ವಾಮೀಜಿ ಪುತ್ರ ರಾಹುಲ್ ಭಟ್ ಕೈವಾಡ ಇರುವುದು ಸ್ಪಷ್ಟವಾಗಿದೆ.
ನಿಶಾಂತ್ ಸೋಮಶೇಖರ್ ನಿಗೆ ಕಳಿಸಲಾದ ಬೆದರಿಕೆಯ ಮೆಸೆಜ್ ಬಂದಿದ್ದು ಇಂಡಿ ಕಾಂಗ್ರೆಸ್ ಶಾಸಕ ಶವಂತ್ ರಾಯ್ ಪಾಟೀಲ್ ಪುತ್ರಿಯ ಹೆಸರಿನಲ್ಲಿ ಸಿಮ್ ಇರುವುದು ಪೊಲೀಸರಿಗೆ ಗೊತ್ತಾಗಿ ತನಿಖಾ ತಂಡ ಇಂಡಿಗೂ ಹೋಗತ್ತದೆ.
ಆದರೆ ಶಾಸಕರ ಪುತ್ರಿ ಕಳೆದ ಒಂದು ವಷ೯ದ ಹಿಂದೆಯೇ ಲಂಡನ್ ಗೆ ಹೋಗಿದ್ದಾಳೆ. ಹೋಗುವ ಮುನ್ನ ಆಕೆ ಮುಂಬೈ ಗೆಳೆಯ ರಾಕೇಶ್ ಎಂಬಾತನಿಗೆ ಕೊಟ್ಟಿರುತ್ತಾಳೆ. ಪೋಲಿಸರು ಮುಂಬೈಗೂ ಹೋಗಿ ರಾಕೇಶ್ ವಿಚಾರಿಸಿದರೆ ಸಿಮ್ ಆತನ ಬಳಿ ಇರುವುದಿಲ್ಲ.
ಅದು ಬೆಂಗಳೂರಿನ ರಾಹುಲ್ ಭಟ್ ನ ಬಳಿ ಇರುವುದು ಪತ್ತೆಯಾಗುತ್ತದೆ. ಆ ಹುಡುಗಿಯ ಹೆಸರಿಲ್ಲಿದ್ದ ಸಿಮ್ ಆರೋಪಿಗಳಿಗೆ ಸಿಕ್ಕಿದ್ದು ಹೇಗೆ ? ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ