ಬೆಂಗಳೂರಿನ ಹೇರೋಹಳ್ಳಿ ವಾರ್ಡ್‍ನ ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೂ ಮುನ್ನ ಬರೆದಿರುವ ಡೇತ್ ನೋಟ್‍ನಲ್ಲಿ ಆತ್ಮಹತ್ಯೆಗೆ ಕಾರಣವನ್ನು ಬಹಿರಂಗಪಡಿಸಿ . ರೇಖಾ , ಸ್ಪಂದನ ಹಾಗೂ ವಿನೋದ್ ಎಂಬುವವರು ಹನಿಟ್ರ್ಯಾಪ್ ಮಾಡಿ ನನ್ನ ಸಾವಿಗೆ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ.
ಡೆತ್ ನೋಟ್ ವಿವರಣೆ :
ಪ್ರಿಯ ಪತ್ನಿ ಸುಮ ಕ್ಷಮಿಸಿ ಬಿಡು, ನಿನಗೆ ಮೋಸ ಮಾಡಿದ್ದೇನೆ. ನಿನ್ನಲ್ಲಿ ಕ್ಷಮೆ ಕೇಳಲು ನಾನು ಅರ್ಹನಲ್ಲ. ಹೆಣ್ಣಿನ ಸಹವಾಸ ಮಾಡಿ ಅವಳಿಂದ ಪೋಟೋ ವೀಡಿಯೋಗಳ ಟ್ರ್ಯಾಪ್‍ಗೆ ಸಿಲುಕಿ, ಬ್ಲ್ಯಾಕ್‍ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ. ತೃಪ್ತಿ, ತನ್ಮಯ ಮತ್ತು ಅಭಯ್‍ನನ್ನು ಚೆನ್ನಾಗಿ ನೋಡಿಕೊ.
ಇಂತಿ ನಿನ್ನ ಮೋಸಗಾರ.
ಅನಂತರಾಜು ಹನಿಟ್ರ್ಯಾಪ್‍ಗೆ ಸಿಲುಕಿ ಮೇ 12ರಂದು ಬ್ಯಾಡರಹಳ್ಳಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಡೇತ್ ನೋಟ್‍ನಲ್ಲಿ ರೇಖಾ, ವಿನೋದ್, ಸ್ಪಂದನ ಎಂಬುವರಿಂದ ಹನಿಟ್ರ್ಯಾಪ್‍ಗೆ ಒಳಗಾಗಿದ್ದೇನೆ ಎಂದು ಹೇಳಿದ್ದಾರೆ
ಇದನ್ನು ಓದಿ : ಮಗುವಿನ ಸಾವುಘೋಷಿಸಿದ ವೈದ್ಯರು: ಅಂತ್ಯಕ್ರಿಯೆ ವೇಳೆ ಉಸಿರಾಟ ನಡೆಸಿದ ನವಜಾತ ಶಿಶು!
ಕೆಅರ್‌ಪುರದ ರೇಖಾ ಎಂಬಾಕೆ ಫೇಸ್‍ಬುಕ್ ಮುಖಾಂತರ ಪರಿಚಯವಾಗಿದ್ದಳು . ಆ ಬಳಿಕ ಖಾಸಗಿ ವೀಡಿಯೋಗಳನ್ನು ಮಾಡಿಟ್ಟುಕೊಂಡು ಬೆದರಿಕೆ ಹಾಕ್ತಿದ್ಲು. ಹಣ ಕೊಡದಿದ್ರೆ ಮಾಧ್ಯಮಗಳಿಗೆ, ರಾಜಕೀಯ ನಾಯಕರಿಗೆ ಫೋಟೋ ವೀಡಿಯೋ ಕಳುಹಿಸಿಕೊಡುವುದಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಾ ಈ ಮೂಲಕ ಮಾನ ಮರ್ಯಾದೆ ಕಳೆಯೋದಾಗಿ ಬೆದರಿಕೆ ಹಾಕಿದ್ದರು. ಸಾಕಷ್ಟು ಹಣ ಕೊಟ್ಟು ಸಾಕಾಗಿದೆ ಎಂದು ಅನಂತರಾಜು ಡೇತ್ ನೋಟ್‍ನಲ್ಲಿ ಉಲ್ಲೇಖಿಸಿದ್ದಾರೆ.
ಎರಡು ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಅನಂತರಾಜು ಈ ಬಾರಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದರು. ಈ ನಡುವೆ ಹನಿಟ್ರ್ಯಾಪ್‍ಗೆ ಸಿಲುಕಿ ಆತ್ಮಹತ್ಯೆ ಶರಣಾಗಿದ್ದರು. ಇದೀಗ ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಅನಂತರಾಜು ಪತ್ನಿ ಸುಮ ದೂರು ದಾಖಲಿಸಿದ್ದಾರೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ