ಬೆಂಗಳೂರು : ಸೆಪ್ಟೆಂಬರ್ 12ರಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ಘೋಷಣೆ ಆಗುವ ಸಾಧ್ಯತೆಯಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸುವ ನಾಯಕರು ಬಿಜೆಪಿ, ಜೆಡಿಎಸ್ ದೋಸ್ತಿ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಗೊತ್ತಾಗಿದೆ.
ಹೆಚ್.ಡಿ ದೇವೇಗೌಡರ ಮಾತುಗಳಿನಿಂದ ಬಿಜೆಪಿ, ಜೆಡಿಎಸ್ ಮೈತ್ರಿ ಈಗ ಅಧಿಕೃತವಾಗಿದೆ. ಇನ್ನು ಸೀಟು ಹಂಚಿಕೆಯೊಂದೇ ಬಾಕಿ ಇದೆ. ಸೀಟು ಹಂಚಿಕೆಯ ಕುರಿತಂತೆ ಬಿಜೆಪಿ ವರಿಷ್ಠರು, ಕುಮಾರಸ್ವಾಮಿ ಅವರು ಮಾತುಕತೆ ನಡೆಸುತ್ತಾರೆ ಎಂದು ಸ್ವತಃ ದೇವೇಗೌಡರೇ ಹೇಳಿದ್ದಾರೆ.
ಹಳೇ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳ ಜೊತೆಗೆ ದೇವೇಗೌಡರು ವಿಜಯಪುರ, ಬೀದರ್, ರಾಯಚೂರಿನ ಸ್ಥಾನವನ್ನು ಕೇಳಿದ್ದಾರೆ ಎನ್ನಲಾಗಿದೆ.
ಭಾನುವಾರ ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ದೇವೇಗೌಡರು ಭಾವುಕರಾಗಿಯೇ ಭಾಷಣ ಮಾಡಿದ್ದಾರೆ.
ನೈತಿಕತೆ ಯಾರಿಗಿದೆ ಇದೆ ಅಂತ ನನಗೆ ಗೊತ್ತಿಲ್ಲ. ನಾನು ವ್ಯಕ್ತಿಗತವಾಗಿ ನಿಂದನೆ ಮಾಡಲು ಹೋಗಲ್ಲ. 90ರ ವಯಸ್ಸಿನಲ್ಲಿ ನಾನು ಗಳಿಸುವುದು ಏನೂ ಇಲ್ಲ. ಹೆಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯ ಹದಗೆಟ್ಟಿದೆ. ಇಲ್ಲಿ ಬಂದಿರುವ ಕಾರ್ಯಕರ್ತರಿಗೆ ಪಕ್ಷ ಉಳಿಸುವ ಶಕ್ತಿಯಿದೆ. ನಿಮ್ಮಿಂದಲೇ ಅದು ಸಾಧ್ಯ. ಬೇರೆ ಯಾರಿಂದಲೂ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಇದನ್ನು ಓದಿ – ಮಾನಸಿಕ ಖಿನ್ನತೆ
ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದು ನಿಜ. ಬಿಜೆಪಿ ನಾಯಕರನ್ನು ಸಂಪರ್ಕ ಮಾಡಿದ್ದು ನಾನು ಪ್ರಧಾನಿಯಾಗಲು ಅಲ್ಲ. ಜೆಡಿಎಸ್ ಪಕ್ಷ ಉಳಿಸಲು ಸಂಪರ್ಕಿಸಿದ್ದೇನೆ. ನಿಮ್ಮ ತಂದೆ ಹಠವಾದಿ, ಅವರ ಮಾತು ಕೇಳಬೇಡ ಅಂತ ಕುಮಾರಸ್ವಾಮಿಗೆ ಬಿಜೆಪಿ ನಾಯಕರು ಹೇಳಿದ್ರು. ನನಗೆ ಯಾರ ಮೇಲೂ ದ್ವೇಷವಿಲ್ಲ. ರಾಜ್ಯದ ಜನತೆಯ ಕೊಡುವ ತೀರ್ಪು ಬಹಳ ಮುಖ್ಯ. ಒಂದು ಪ್ರಾದೇಶಿಕ ಪಕ್ಷ ಉಳಿಸುವ, ಬೆಳೆಸುವ ಕೆಲಸ ಮಾಡಿ ಎಂದು ದೇವೇಗೌಡರು ಹೇಳಿದ್ದಾರೆ.