ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಲಿ: ಸಿದ್ದರಾಮಯ್ಯ ಆಕ್ರೋಶ

Team Newsnap
2 Min Read

ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ. ಆಗ ರಾಜ್ಯದಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಎಂಟಿಬಿ ನಾಗರಾಜ್ ಸೇರಿ ಬಿಜೆಪಿ ವಲಸಿಗರ ಸಭೆ ವಿಚಾರವಾಗಿ, ನಾನು ಅದರ ಬಗ್ಗೆ ಮಾತನಾಡಲ್ಲ. ಅವರು ಮಾಡಲಿ, ಬಿಡಲಿ ನಮಗೇನು? ಇವರು ವ್ಯಾಪಾರ ಮಾಡಿಕೊಂಡು ಅಲ್ಲಿಗೆ ಹೋದವರು. ಅವರ ವ್ಯಾಪಾರ ನನಗೇನು ಗೊತ್ತು? ಎಂದು ಬಿಜೆಪಿ ವಲಸಿಗರ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಿಧಾನಮಂಡಲ ಅಧಿವೇಶನ ವಿಚಾರಕ್ಕೆ ಅಸೆಂಬ್ಲಿ ಪ್ರಾರಂಭವಾದ ನಂತರ ಗೊತ್ತಾಗುತ್ತೆ. ಅಲ್ಲಿ ಏನು ಮಾತನಾಡ್ತೇವೆ ನೋಡಿ. ಪ್ರವಾಹ, ಬೇರೆ ಬೇರೆ ವಿಚಾರ ಇವೆ ಅಲ್ಲಿ ಮಾತನಾಡೋದನ್ನ ನೀವೇ ನೋಡುವಿರಂತೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ಇನ್ನು, ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಒಬಿಸಿ ಪಟ್ಟಿಗೆ ಬರುವವರಿಗೆ ಒಂದು ಕಮಿಷನ್ ಇದೆ.  ಪರ್ಮನೆಂಟ್ ಒಬಿಸಿ ಆಯೋಗ ಇದೆ. ಪಟ್ಟಿಗೆ ಸೇರಿಸೋದು, ಡಿಲೀಟ್ ಮಾಡೋದು ಅದಕ್ಕೆ ಸೇರಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸೇರಿರುತ್ತೆ. ಆಯೋಗ ಮಾಡಬಹುದೆಂದು ವರದಿ ನೀಡಬೇಕು.  ವರದಿ ನಂತರ ಅದರ ಬಗ್ಗೆ ಗಮನಹರಿಸಬಹುದು. ಒಬಿಸಿಗೆ ಸೇರಿಸಿ ಎಂದು ಕೇಳೋದು ತಪ್ಪಿಲ್ಲ.  ಸಂವಿಧಾನದ 334 ವಿಧಿಯಲ್ಲೇ ತಿಳಿಸಲಾಗಿದೆ. ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳೋಕೋ, ಯಾಕೋ? ನನಗೇನು ಗೊತ್ತು ಎಂದು ಕಿಡಿಕಾರಿದ್ದಾರೆ.

ಇನ್ನು, ಸಿಎಂ ರಾಜಕೀಯ ಕಾರ್ಯದರ್ಶಿ ಎನ್ .ಆರ್.ಸಂತೋಷ್ ಆತ್ಮಹತ್ಯೆ ಪ್ರಯತ್ನ ವಿಚಾರವಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂತೋಷ್ ಯಾರ್ರೀ, ನಮಗೇನು‌ ಗೊತ್ತು? ಅವರ ಸಮಸ್ಯೆ ನಮಗೇನು ಗೊತ್ತು? ಅದು ಅವರ ವೈಯುಕ್ತಿಕ ವಿಚಾರ. ರಾಜಕೀಯ ಒತ್ತಡ, ಅದೆಲ್ಲ ಇದೆ ಅನ್ನೋದು ನನಗೇನು ಗೊತ್ತು? ವಿಚಾರಣೆ ನಂತರ ಎಲ್ಲವೂ ಬರುತ್ತೆ ಎಂದು ಹೇಳಿದ್ದಾರೆ.

Share This Article
Leave a comment