February 5, 2023

Newsnap Kannada

The World at your finger tips!

BSY,politics,meeting

BJP eyes on old Mysore part. Amit Shah conference in Mandya on December 30 ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು. ಡಿ.30ಕ್ಕೆ ಮಂಡ್ಯದಲ್ಲಿ ಅಮಿತ್‌ ಶಾ ಸಮಾವೇಶ

ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು. ಡಿ.30ಕ್ಕೆ ಮಂಡ್ಯದಲ್ಲಿ ಅಮಿತ್‌ ಶಾ ಸಮಾವೇಶ

Spread the love

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲಿಸುವ ಬಗ್ಗೆ ಪಣ ತೊಟ್ಟಿರುವ ರಾಜ್ಯ ನಾಯಕರು ಡಿ.30ಕ್ಕೆ ಮಂಡ್ಯದಲ್ಲಿ ಸಮಾವೇಶ ಆಯೋಜಿಸಿದ್ದಾರೆ

ಮಂಡ್ಯ ಜಿಲ್ಲೆಯಲ್ಲಿ 5 ರಿಂದ 6 ಕ್ಷೇತ್ರಗಳನ್ನು ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಈ ಸಮಾವೇಶಕ್ಕೆ ಗೃಹ ಸಚಿವ ಅಮಿತ್‌ ಶಾ ಆಗಮಿಸಲಿದ್ದಾರೆ.ದೇಶದಲ್ಲಿ ಮತ್ತೆ ಲಾಕ್ ಡೌನ್ ಸಾಧ್ಯತೆ? ಕೇಂದ್ರದಿಂದ ಮೂರು ಮಹತ್ವದ ನಿರ್ಧಾರ

ಡಿ.30ರಂದು ಮನ್‌ಮುಲ್‌ನ ಮೆಗಾ ಡೈರಿ ಉದ್ಘಾಟನೆಯನ್ನು ಅಮಿತ್‌ ಶಾ ಮಾಡಲಿದ್ದಾರೆ. ಸರ್ಕಾರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಬರುತ್ತಿರುವ ಅಮಿತ್‌ ಶಾ ಪಕ್ಷದ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.

ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಕನಿಷ್ಟ ಐದು ಕ್ಷೇತ್ರದಲ್ಲಿ‌ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಹೈಕಮಾಂಡ್‌ನಿಂದ ರಾಜ್ಯದ ನಾಯಕರಿಗೆ ಸೂಚನೆ ಬಂದಿದೆ.

ಮಂಡ್ಯದ ಬಾಲಕರ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಒಂದು ಲಕ್ಷ ಜನರನ್ನು ಸೇರಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ‌. ಈ ಸಮಾವೇಶದ ನಂತರ ಮಂಡ್ಯದಲ್ಲೇ ಅಮಿತ್‌ ಶಾ ಸಭೆ ನಡೆಸಿ ಚುನಾವಣೆ ತಂತ್ರವನ್ನು ಪ್ರಸ್ತಾಪ ಮಾಡಲಿದ್ದಾರೆ.

error: Content is protected !!