November 16, 2024

Newsnap Kannada

The World at your finger tips!

cm , mysore , film city

ಬಿಜೆಪಿ ದಿವಾಳಿ : ಮೈಸೂರಿನಲ್ಲಿ ಸಿದ್ದು ವಾಗ್ದಾಳಿ

Spread the love

ಮೈಸೂರು : ನಮ್ಮ ಪಕ್ಷ ಅಧಿಕಾರಕ್ಕೆ ಬಂದು ನೂರು ಆಯ್ತು . ರಾಜ್ಯದಲ್ಲಿ ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಿಲ್ಲ . ಬಿಜೆಪಿ ಎಲ್ಲಿದೆ? ಆ ಪಕ್ಷ ದಿವಾಳಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸೋಮವಾರ ತೀಕ್ಷ್ಣವಾಗಿ ಕುಟುಕಿದರು.

ಸುದ್ದಿಗಾರರ ಜೊತೆ ಮಾತನಾಡಿದ ಸಿಎ ಸಿದ್ದು, ರಾಜ್ಯ ಸರ್ಕಾರದ ರಚನೆ ಆಗಿ ನೂರು ದಿನ ಆದರೂ ವಿರೋಧ ಪಕ್ಷದ ನಾಯಕ ನೇಮಕ ಮಾಡಲು ಬಿಜೆಪಿ ಅವರಿಗೆ ಆಗಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಪರಿಸ್ಥಿತಿ ಬಂದಿಲ್ಲ ಎಂದು ಹೇಳಿದರು.

ನಾನು ಮೂರು ದಿನಗಳ ಕಾಲ ಮೈಸೂರಿನಲ್ಲಿ ಇರುತ್ತೇನೆ. ಇಂದು ಕೆಪಿಡಿ ಸಭೆ. ಮಂಗಳವಾರ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ. 30 ರಂದು ಗೃಹ ಲಕ್ಷ್ಮಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಿದ್ದೇವೆ ಎಂದರು.

ಗೃಹ ಲಕ್ಷ್ಮಿ ಯೋಜನೆ ಉದ್ಘಾಟನೆಗೆ ಸಂಸದ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸುತ್ತಿದ್ದಾರೆ. ಖರ್ಗೆ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ. ನಾನು ಅಧ್ಯಕ್ಷತೆ ವಹಿಸುತ್ತಿದ್ದೇನೆ. ಮೈಸೂರು,ಮಂಡ್ಯ, ಚಾಮರಾಜನಗರ ಕೊಡಗು ಜಿಲ್ಲೆಗಳು ಒಟ್ಟಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಗೃಹ ಲಕ್ಷ್ಮಿ ಯೋಜನೆ ಬೆಳಗಾವಿ ಬದಲಾಗಿ ಮೈಸೂರಿನಲ್ಲಿ ಮಾಡುತ್ತಿದ್ದೇವೆ. ಈ ಬದಲಾವಣೆ ಹಿಂದೆ ಯಾವುದೇ ಉದ್ದೇಶ ಇಲ್ಲ. ಬೆಳಗಾವಿಯಲ್ಲೂ ಕಾರ್ಯಕ್ರಮ ನಡೆಯುತ್ತದೆ. ರಾಜ್ಯ ಸರ್ಕಾರದ ಕಾರ್ಯಕ್ರಮ ಮೈಸೂರಿನಲ್ಲಿ ಮಾಡುತ್ತೇವೆ ಎಂದು ತಿಳಿಸಿದರು.

ದೇಶದಲ್ಲಿ ಇದೊಂದು ದೊಡ್ಡ ಕಾರ್ಯಕ್ರಮ. ಈ ಯೋಜನೆಗೆ ಒಂದು ವರ್ಷಕ್ಕೆ 32,000 ಕೋಟಿ ಖರ್ಚು ಆಗುತ್ತದೆ. 18 ಸಾವಿರ ಕೋಟಿ ಈ ವರ್ಷ ಒಂದರಲ್ಲೇ ಯೋಜನೆಗೆ ಖರ್ಚಾಗುತ್ತದೆ. ಒಂದು ಕೋಟಿ 33 ಲಕ್ಷ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ಕೊಡುತ್ತಿದ್ದೇವೆ. ಐದು ಕಾರ್ಯಕ್ರಮ ಜಾರಿಗೆ ಬಂದಾದ ಒಂದು ತಿಂಗಳಿಗೆ ನಾಲ್ಕರಿಂದ 5 ಸಾವಿರ ಒಂದು ಕುಟುಂಬಕ್ಕೆ ಸಿಗುತ್ತದೆ ಎಂದರು.ಚಿನ್ನದ ಪದಕ ಗೆದ್ದು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ

ಬರ ವಿಚಾರವಾಗಿ ಸಂಪುಟ ಉಪ ಸಮಿತಿ ಸಭೆ ಮಾಡಿ ನಿರ್ಧಾರ ಮಾಡಲಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಭಿತ್ತನೆ ಚಿಂತನೆ ಸರ್ಕಾರದ ಮುಂದೆ ಇಲ್ಲ. ಮೋಡ ಭಿತ್ತನೆ ಯಾವತ್ತೂ ಯಶಸ್ವಿ ಆಗಿಲ್ಲ. ಬರಗಾಲ ಘೋಷಣೆ ಮಾಡಿದ ಬಳಿಕ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದರು

Copyright © All rights reserved Newsnap | Newsever by AF themes.
error: Content is protected !!