January 30, 2026

Newsnap Kannada

The World at your finger tips!

panjab amrendra

ಕೃಷಿ ಕಾನೂನು ವಾಪಸ್: ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರೇಂದ್ರ ಜೊತೆ ಬಿಜೆಪಿ ಮೈತ್ರಿ

Spread the love

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುತ್ತಿದ್ದಂತೆ ಪಂಜಾಬ್ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.

2022 ರ ಫೆಬ್ರವರಿ – ಮಾರ್ಚ್‍ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಯ ಪೂರ್ವ ಮೈತ್ರಿ ಲೆಕ್ಕಾಚಾರಗಳು ಆರಂಭವಾಗಿವೆ.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದೆ.

ಬಿಜೆಪಿ ಈ ಬಾರಿ ಶಿರೋಮಣಿ ಅಕಾಲಿದಳ ಜೊತೆಗೆ ಮೈತ್ರಿಗೆ ಹಿಂದೇಟು ಹಾಕಿದೆ. ಹೀಗಾಗಿ ಕ್ಯಾಪ್ಟನ್ ಜೊತೆಗೆ ಹೊಸ ರಾಜಕೀಯ ತಂತ್ರಗಳನ್ನು ಮಾಡಲು ಮುಂದಾಗಿದೆ.

ಇದಕ್ಕೆ ಪೂರಕವಾಗಿ ಹೇಳಿಕೆ ನೀಡಿರುವ ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವಿನಿ ಶರ್ಮಾ ಕ್ಯಾಪ್ಟನ್ ಜೊತೆಗಿನ ಮೈತ್ರಿಗೆ ನಮ್ಮ ಆದ್ಯತೆಯಾಗಿದೆ. ಶಿರೋಮಣಿ ಅಕಾಲಿದಳ ಜೊತೆಗೆ ಮೈತ್ರಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಪ್ರತ್ಯೇಕ ಪಕ್ಷ ಸ್ಥಾಪನೆ ಬಗ್ಗೆ ಘೋಷಿಸಿದರು.

ಅಲ್ಲದೇ ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದ ಅವರು ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವ ಬಗ್ಗೆ ಚರ್ಚೆ ನಡೆಸಿದ್ದರು.

ಅಮರೇಂದ್ರ ಸಿಂಗ್ ಭೇಟಿ ಬಳಿಕ ಕೇಂದ್ರ ಸರ್ಕಾರವೂ ಕಾನೂನು ವಾಪಸ್ ಪಡೆದಿದ್ದು ತೆರೆ ಹಿಂದಿನ ರಾಜಕೀಯ ಹೊಂದಾಣಿಕೆಯನ್ನು ತೊರ್ಪಡಿಸಿದೆ.

error: Content is protected !!