ಲೋಕ ಚುನಾವಣೆ: 72 ಅಭ್ಯರ್ಥಿಗಳ ಬಿಜೆಪಿ 2ನೇ ಪಟ್ಟಿ ರಿಲೀಸ್ – ರಾಜ್ಯದ 20 ಕ್ಷೇತ್ರದಲ್ಲಿ ಹಾಲಿ 6 ಸಂಸದರಿಗೆ ಕೊಕ್‌

Team Newsnap
1 Min Read
  • ಪ್ರತಾಪ ಸಿಂಹ, ನಳೀನ್ ಕುಮಾರ್ ಕಟೀಲ್, ಸಂಗಣ್ಣ ಕರಡಿಗೆ ಟಿಕೆಟ್ ಮಿಸ್
  • ⁠ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ 2ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ನವದೆಹಲಿ : ಬಿಜೆಪಿ ತನ್ನ 72 ಅಭ್ಯರ್ಥಿಗಳ ಪಟ್ಟಿಯಲ್ಲಿ ಕರ್ನಾಟಕದ 20 ಲೋಕಸಭಾ ಕ್ಷೇತ್ರಕ್ಕೆ ಹೆಸರು ಘೋಷಣೆ ಮಾಡಿದೆ 20 ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ.

ಯಾರಿಗೆಲ್ಲಾ ಟಿಕೆಟ್ ಮಿಸ್‌!

  • ಮೈಸೂರು – ಪ್ರತಾಪ ಸಿಂಹ
  • ಬೆಂಗಳೂರು ಉತ್ತರ – ಡಿ.ವಿ ಸದಾನಂದಗೌಡ
  • ಉತ್ತರ ಕನ್ನಡ – ನಳೀನ್ ಕುಮಾರ್ ಕಟೀಲ್
  • ಕೊಪ್ಪಳ – ಸಂಗಣ್ಣ ಕರಡಿ
  • ತುಮಕೂರು – ಜಿ.ಎಸ್‌ ಬಸವರಾಜ್
  • ಚಾಮರಾಜನಗರ – ವಿ. ಶ್ರೀನಿವಾಸ ಪ್ರಸಾದ್

20 ಲೋಕಸಭಾ ಕ್ಷೇತ್ರಗಳ ಪಟ್ಟಿಯಲ್ಲಿ ನಾಲ್ವರು ಬಿಜೆಪಿ ಸಂಸದರಿಗೆ ಈ ಬಾರಿ ಟಿಕೆಟ್ ಮಿಸ್ ಆಗಿದೆ.

ಮೈಸೂರಿನಲ್ಲಿ ಪ್ರತಾಪ ಸಿಂಹ ಬದಲಿಗೆ ಯದುವೀರ್ ಕೃಷ್ಣದತ್ತ್ ಒಡೆಯರ್ ಅವರಿಗೆ ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಬದಲು ಬ್ರಿಜೇಶ್ ಚೌಟಾ ಅವರಿಗೆ ಟಿಕೆಟ್ ನೀಡಲಾಗಿದೆ.

ಕೊಪ್ಪಳದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಅವರ ಬದಲು ಡಾ. ಬಸವರಾಜ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.

ಚಾಮರಾಜನಗರದಲ್ಲೂ ಶ್ರೀನಿವಾಸ ಪ್ರಸಾದ್ ಅವರ ಬದಲು ಎಸ್. ಬಾಲರಾಜ್ ಅವರಿಗೆ ಅವಕಾಶ ನೀಡಲಾಗಿದೆ.

ತುಮಕೂರಿನಲ್ಲೂ ಜಿ.ಎಸ್ ಬಸವರಾಜು ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ.15 ಸಾವಿರ ರು ಲಂಚ ಸ್ವೀಕಾರ : ಹನೂರು ಬಿಇಓ- ಸಿಆರ್ ಪಿ ಲೋಕಾ ಬಲೆಗೆ

image 4


ಇನ್ನು, ಬಿಜೆಪಿ ಜೆಡಿಎಸ್ ಸ್ಪರ್ಧಿಸುವ ಮಂಡ್ಯ, ಹಾಸನ, ಕೋಲಾರ ಹೊರೆತುಪಡಿಸಿ, ಚಿತ್ರದುರ್ಗ, ಬೆಳಗಾವಿ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ರಾಯಚೂರು ಕ್ಷೇತ್ರಗಳಿಗೆ ಟಿಕೆಟ್ ಮಾಡುವುದು ಬಾಕಿ ಇದೆ.

Share This Article
Leave a comment