Editorial

ಹಾಗಲಕಾಯಿ (Bitter gourd) ಕಹಿಯಾದರೂ ಅಮೃತ

ಹಾಗಲಕಾಯಿ (Bitter gourd) ಕಹಿಗೆ ಹೆಸರುವಾಸಿಯಾಗಿದೆ. ಅದರ ಸೇವನೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ (health) ಪ್ರಯೋಜನಕಾರಿಯಾಗಿದೆ. ಪ್ರಾಚೀನ ಕಾಲದಿಂದಲೂ ಔಷಧಿಗಳಲ್ಲಿ ಮತ್ತು ಆಹಾರದಲ್ಲಿ ಇದನ್ನು ಬಳಸುತ್ತಾರೆ.

ತರಕಾರಿಗಳಲ್ಲಿ ಅತ್ಯಂತ ಕಹಿಯಾದ ಒಂದು ತರಕಾರಿ ಎಂದರೆ ಅದು ಹಾಗಲಕಾಯಿ. ಇದು ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣ, ಮೆಗ್ನೀಷಿಯಂ, ಮತ್ತು ಪೊಟ್ಯಾಷಿಯಂ ಜೀವಸತ್ವ – ಸಿ ಹಾಗೂ ಅಧಿಕ ಪ್ರಮಾಣದಲ್ಲಿ ನಾರಿನಾಂಶ ಹೊಂದಿದೆ.

ಹಾಗಲಕಾಯಿಯಲ್ಲಿ ಸಾಕಷ್ಟು ವಿಟಮಿನ್ ‘ಎ’ ಮತ್ತು ವಿಟಮಿನ್ ‘ಸಿ’ ಸಮೃದ್ಧವಾಗಿದೆ. ಇದರಿಂದಾಗಿ ಹಾಗಲಕಾಯಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಗಲಕಾಯಿಯನ್ನು (Bitter gourd) ಸಾಧಾರಣವಾಗಿ ಅದು ಹಸಿರಾಗಿರುವಾಗ ಅಥವಾ ಹಳದಿ ಬಣ್ಣಕ್ಕೆ ತಿರುಗುವ ಆರಂಭಿಕ ಹಂತದಲ್ಲೇ ಸೇವಿಸಲಾಗುತ್ತದೆ. ಹಾಗಲಕಾಯಿಯ ಎಳೆಯದಾದ ಚಿಗುರು ಬಳ್ಳಿಗಳು ಹಾಗು ಎಲೆಗಳನ್ನೂ ಸಹ ಸೊಪ್ಪಿನ ಪದಾರ್ಥವಾಗಿ ಸೇವಿಸಬಹುದು.

ಹಾಗಲಕಾಯಿ (Bitter gourd) ಯಲ್ಲಿರುವ ಪೌಷ್ಟಿಕಾಂಶಗಳು (100 ಗ್ರಾಂ)

  • ಸಸಾರಜನಕ (ಗ್ರಾಂ) 1.6
  • ಕೊಬ್ಬು (ಗ್ರಾಂ) 0.2
  • ನಾರಿನಾಂಶ (ಗ್ರಾಂ) 0.8
  • ಶರ್ಕರ ಪಿಷ್ಟ (ಗ್ರಾಂ) 4.2
  • ಕ್ಯಾಲ್ಸಿಯಂ (ಮಿ.ಗ್ರಾಂ) 20.0
  • ಕಬ್ಬಿಣ (ಮಿ.ಗ್ರಾಂ) 1.8
  • ಸೋಡಿಯಂ (ಮಿ. ಗ್ರಾಂ) 17.8
  • ಪೊಟ್ಯಾಷಿಯಂ (ಮಿ.ಗ್ರಾಂ) 152.8
  • ಜೀವಸತ್ವ- ಸಿ (ಮಿ.ಗ್ರಾಂ) 210.0

ಹಾಗಲಕಾಯಿಯ ಉಪಯೋಗಗಳು ಹಾಗೂ ಔಷಧೀಯ ಗುಣಗಳು.

ರಕ್ತವನ್ನು ಶುದ್ಧಿಕರಿಸುತ್ತದೆ ( Blood purify) : ವಾರಕ್ಕೊಮ್ಮೆ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಹಾಗಲಕಾಯಿ ರಸ ಸೇವಿಸುವುದರಿಂದ ರಕ್ತ ಶುದ್ಧಿಗೊಳ್ಳುತ್ತದೆ.

ಕಣ್ಣಿನ ದೃಷ್ಟಿ (Eye sight) ಹೆಚ್ಚಿಸುತ್ತದೆ: ಇದರಲ್ಲಿನ ಬೀಟಾ ಕ್ಯಾರೋಟಿನ್ ಮತ್ತು ಜೀವಸತ್ವ ಎ ಪೋಷಕಾಂಶಗಳು ಹೇರಳವಾಗಿರುವುದರಿಂದ ಕಣ್ಣಿಗೆ ಅವಶ್ಯಕವಾದ ಪೋಷಕಾಂಶಗಳು ದೊರೆತು ಕಣ್ಣಿನ ತೊಂದರೆಗಳಿಂದ ರಕ್ಷಣೆ ನೀಡುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಲು (weight loose) : ಸಹಾಯಕವಾಗಿದೆ: ಹಾಗಲಕಾಯಿಯ ಸೇವನೆಯಿಂದ ದೇಹದಲ್ಲಿ ಶೇಖರಣೆಯಾಗುವ ಕೊಬ್ಬಿನಾಂಶದ ಪ್ರಮಾಣವು ಕಡಿಮೆಯಾಗುತ್ತದೆ. ಕಾರಣ ದೇಹದ ತೂಕದಲ್ಲಿ ಇಳಿಕೆಯನ್ನು ಕಾಣಬಹುದು. ಗ್ಲುಕೋಸ್ ಹೀರಿಕೆಯು ಕಡಿಮೆಯಾಗುವುದರಿಂದ ಶೇಖರಣೆಯು ಸಾಧ್ಯವಾಗುವುದಿಲ್ಲ. ಆ ಮೂಲಕ ಸುಲಭವಾಗಿ ತೂಕವನ್ನು ಕಡಿಮೆಮಾಡಿಕೊಳ್ಳಬಹುದು.

ಹಾಗಲಕಾಯಿ ನಮ್ಮ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಲಕಾಯಿ ಸೇವನೆಯಿಂದ ಹೊಟ್ಟೆಯಲ್ಲಿ ಆಹಾರದ ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ. ಹಾಗಲಕಾಯಿ ತಿನ್ನುವುದರಿಂದ ಹೊಟ್ಟೆಯಲ್ಲಿ ಅನಿಲ (Gastric) ಉತ್ಪತ್ತಿಯಾಗುವುದಿಲ್ಲ.

ಅಡುಗೆ ಮನೆಯಲ್ಲಿ ಹಾಗಲಕಾಯಿ

ಅಡುಗೆ ಮನೆಯಲ್ಲಿ ಹಾಗಲಕಾಯಿಯನ್ನು ವಿವಿಧ ರೂಪದಲ್ಲಿ ಬಳಸಲಾಗುತ್ತದೆ,

  1. ಹಾಗಲಕಾಯಿ ಗೊಜ್ಜು
  2. ಹಾಗಲಕಾಯಿ ಜ್ಯೂಸ್
  3. ಹಾಗಲಕಾಯಿ ಪಲ್ಯ
  4. ಹಾಗಲಕಾಯಿ ಚಿಪ್ಸ್
  5. ಹಾಗಲಕಾಯಿ ಚಟ್ನಿಪುಡಿ
  6. ಹಾಗಲಕಾಯಿ ಫ್ರೈ

ಹೀಗೆ ಅನೇಕ ರೀತಿಯಲ್ಲಿ ಉಪಯೋಗವಾಗುವ ಹಾಗಲಕಾಯಿ ರುಚಿಯೊಂದಿಗೆ ಆರೋಗ್ಯಕ್ಕೆ ಹಿತ ಮಿತವಾಗಿರುತ್ತದೆ.

ಹಾಗಲಕಾಯಿ ಗೊಜ್ಜು

ಹಾಗಲಕಾಯಿ ಗೊಜ್ಜು ಮಾಡುವ ವಿಧಾನ :

  • ಹಾಗಲಕಾಯಿ 4
  • ಹುಣಸೆಹಣ್ಣಿನ ರಸ 6 ಚಮಚ
  • ರುಚಿಗೆ ತಕ್ಕಷ್ಟು ಉಪ್ಪು
  • ಸಾರಿನಪುಡಿ 3 ಚಮಚ
  • ಬೆಲ್ಲ ಸ್ವಲ್ಪ

ವಿಧಾನ : ಬಾಣಲೆಗೆ 6 ಚಮಚ ಎಣ್ಣೆ ಹಾಕಿ ಸಾಸುವೆ, ಕರಿಬೇವು, ಒಂದು ಒಣಮೆಣಸಿಕಾಯಿ, ಇಂಗು ಹಾಕಿ ಒಗ್ಗರಣೆ ಮಾಡಿ, ನಂತರ ಸಣ್ಣದಾಗಿ ಹೆಚ್ಚಿದ ಹಾಗಲಕಾಯಿಯನ್ನು ಹಾಕಿ ಹುರಿಯಬೇಕು,ಬಣ್ಣ ಬದಲಾದ ನಂತರ ಹುಣಸೆ ರಸ, ಉಪ್ಪು, ಬೆಲ್ಲ ಒಂದೊಂದೆ ಹಾಕಿ ಕೊನೆಯಲ್ಲಿ ಸಾರಿನಪುಡಿ ಹಾಕಿ ಒಂದು ಕುದಿ ಕುದಿಸಿದರೆ ಹಾಗಲಕಾಯಿ ಗೊಜ್ಜು ತಯಾರಾಗುತ್ತದೆ.

Team Newsnap
Leave a Comment
Share
Published by
Team Newsnap

Recent Posts

ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ

ನವದೆಹಲಿ : ಲೋಕಸಭೆ ಚುನಾವಣೆಯನ್ನು ಹಿನ್ನಲೆಯಲ್ಲಿ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌… Read More

May 3, 2024

ಬಿಜೆಪಿ ಜೊತೆಗಿನ ಮೈತ್ರಿ ಸದ್ಯಕ್ಕೆ ನನಗೆ ಮುಖ್ಯ ಅಲ್ಲ: ಎಚ್ ಡಿ ಕೆ

ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀವ್ರ ಪೇಚಿಗೆ ಸಿಲುಕಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ… Read More

May 3, 2024

ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು

ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್‍ಐಆರ್… Read More

May 3, 2024

ರಾಮನಗರ : ಐಜೂರಿನಲ್ಲಿ ಕರಡಿ ಪ್ರತ್ಯಕ್ಷ

ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More

May 3, 2024

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲು

ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More

May 3, 2024

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024