December 2, 2021

Newsnap Kannada

The World at your finger tips!

ಬಿಟ್ ಕಾಯಿನ್ ಹಗರಣ : ಕಾಂಗ್ರೆಸ್ ನಾಯಕರೂ ಇದ್ದಾರೆ – ಸಿಎಂ

Spread the love

ಬಿಟ್ ಕಾಯಿನ್ ಹಗರಣ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಗರಂ ಆಗಿ ಈ ಹಗರಣದಲ್ಲಿ ಕಾಂಗ್ರೆಸ್ ನಾಯಕರೂ ಇದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ

ಖರ್ಗೆ ಹೇಳಿಕೆಯನ್ನು ಮಾಧ್ಯಮಗಳು ಸಿಎಂ ಮುಂದೆ ಪ್ರಸ್ತಾಪಿಸಿದಾಗ ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರೂ ಇದ್ದಾರೆ ಆದರೆ ನಾನು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ ಎಂದರು.

ಪ್ರಿಯಾಂಕ್ ಏನು ಹೇಳಿದ್ದಾರೆ?

ಸದ್ಯ ರಾಜ್ಯದಲ್ಲಿ ಬಿಟ್ ಕಾಯಿನ್, ಕರೆನ್ಸಿ ಸೇರಿದಂತೆ ಹಲವು ಅಕ್ರಮ ದಂಧೆಗಳು ಬಿಂದಾಸಾಗಿ ನಡೆಯುತ್ತಿವೆ. ಇದರಲ್ಲಿ ಸಾವಿರಾರು ಕೋಟಿ ರೂಪಾಯಿಯ ವ್ಯವಹಾರ ಈಗಾಗಲೇ ಆಗಿದೆ. ಅಧಿಕಾರಿಗಳು ಹಾಗೂ ಪ್ರಭಾವಿ ನಾಯಕರು ಸಪೋರ್ಟ್ ನಿಂದ ನಡೆಯುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ಹೇಳಿದ್ದಾರೆ.

ಪಾರದರ್ಶಕ ತನಿಖೆ ನಡೆಸಿದರೆ ಈ ಹಗರಣದಲ್ಲಿ ಯಾರು ಭಾಗವಹಿಸಿದ್ದಾರೆ ಎನ್ನುವುದು ಒಂದೇ ಒಂದು ತಿಂಗಳಲ್ಲಿ ಹೊರಬರಲಿದೆ. ಆದರೆ ಸರ್ಕಾರಕ್ಕೆ ಈ ಬಗ್ಗೆ ಆಸಕ್ತಿ ಇದೆಯಾ ಎನ್ನುವುದು ಮುಖ್ಯವಾಗಿದೆ.

ಈ ಹಗರಣದಲ್ಲಿ ಕಾಂಗ್ರೆಸ್, ಬಿಜೆಪಿ ಯಾವುದೇ ನಾಯಕರು ಇರಲಿ ಮೊದಲು ತನಿಖೆ ನಡೆಸಿ ಕ್ರಮ ಜರುಗಿಸಬೇಕಾಗಿದೆ. ಆದರೆ ಪ್ರಮುಖ ಆರೋಪಿ ಶ್ರೀಕಿಯನ್ನು ವಿಚಾರಣೆಗೆ ಬಿಡುತ್ತಿಲ್ಲ, ಆತನನ್ನು 10 ದಿನ ವಿಚಾರಣೆ ನಡೆಸಿದರೆ ಈ ಹಗರಣ ಸಂಪೂರ್ಣ ಹೊರಬರುತ್ತದೆ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

error: Content is protected !!