September 29, 2022

Newsnap Kannada

The World at your finger tips!

chanrayapattan

ಚನ್ನರಾಯಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಬಿದ್ದ ಬೃಹತ್​​​ ಮರ: ಸ್ಥಳದಲ್ಲೇ ಬೈಕ್​ ಸವಾರ ಸಾವು

Spread the love

ಭಾರೀ ಗಾಳಿಗೆ ಮರ ಬಿದ್ದು ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ರಸ್ತೆಯ ಮಾಳೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ರಂಗಶೆಟ್ಟಿ (40) ಮೃತ ದುರ್ದೈವಿ.

ಸತತವಾಗಿ ಸುರಿಯುತ್ತಿರುವ ಭಾರೀ ಪ್ರಮಾಣದ ಗಾಳಿ ಸಹಿತ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿ ಸಹಿತ ಮಳೆಗೆ ಬೃಹತ್​​ ಮರವೊಂದು ಓರ್ವ ಬೈಕ್​ ಸವಾರನ ಮೇಲೆ ಬಿದ್ದಿದೆ. ಬೃಹತ್​ ಮರದ ಕೆಳಗೆ ಸಿಲುಕಿ ನರಳಾಡಿ ವ್ಯಕ್ತಿಯು ಸಾವನ್ನಪ್ಪಿದ್ದಾನೆ.

ಮೃತ ವ್ಯಕ್ತಿಯು ಕಲ್ಲಸೋಮನಹಳ್ಳಿ ಗ್ರಾಮದ ನಿವಾಸಿ.ಇನ್ನು ಬೈಕ್‌ನಲ್ಲಿ ಚನ್ನರಾಯಪಟ್ಟಣದಿಂದ ತನ್ನ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಎರಡು ಜೆಸಿಬಿ, ಹಿಟಾಚಿ ಯಂತ್ರ ಬಳಸಿ ಮೃತ ವ್ಯಕ್ತಿಯ ಶವ ಹೊರತೆಗಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

error: Content is protected !!