ದಕ್ಷಿಣ ಕನ್ನಡ ಆಯ್ತು, ಇದೀಗ ಸಕ್ಕರೆನಾಡು ಮಂಡ್ಯದಲ್ಲೂ ನೈತಿಕ ಪೊಲೀಸ್ ಗಿರಿ ನಡೆದ ಘಟನೆ ಮಂಡ್ಯ ತಾಲೂಕಿನ ಸುಂಡಹಳ್ಳಿ ಬಳಿ ಜರುಗಿದ್ದು ತಡವಾಗಿ ವರದಿಯಾಗಿದೆ.
4 ದಿನದ ಹಿಂದೆ ನಡೆದ ಘಟನೆ, ತಡವಾಗಿ ಬೆಳಕಿಗೆ ಬಂದಿದೆ, ಅನ್ಯಕೋಮಿನ ಹುಡುಗ-ಹುಡುಗಿ ತೆರಳುತ್ತಿದ್ದ ಬೈಕ್ ಗೆ ಅಡ್ಡಗಟ್ಟಿದ ಯುವಕರ ಗುಂಪೊಂದು ಯುವಕನನ್ನು ಪ್ರಶ್ನೆ ಮಾಡಿದ ವಿಡಿಯೋ ವೈರಲ್ ಆಗಿದೆ. ಹಿಂದೂ ಸಂಘಟನೆ ಕಾರ್ಯಕರ್ತರಿಂದ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ
ಮುಸ್ಲಿಂ ಯುವಕನ ಮೇಲೆ ಹಲ್ಲೆಗೆ ಯತ್ನ:
ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಬೈಕ್ ನಲ್ಲಿ ಹೋಗುತ್ತಿದ್ದದ್ದನ್ನು ಗಮನಿಸಿ
ಶ್ರೀರಂಗಪಟ್ಟಣದಿಂದಲೂ ಬೈಕ್ ಹಿಂಬಾಲಿಸಿರುವ ಮಂಡ್ಯ ತಾಲೂಕಿನ ಭಜರಂಗ ಸೇನೆ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ಮಾಡಿದ್ದಾರೆಂದು ಹೇಳಲಾಗಿದೆ.
ಹೆದ್ದಾರಿ ಮಧ್ಯೆ ಮುಸ್ಲಿಂ ಯುವಕನ ಬೈಕ್ ಅಡ್ಡಗಟ್ಟಿ ಯುವತಿಯನ್ನು ಕೆಳಗಿಳಿಸಿ ಪೋಷಕರ ವಶಕ್ಕೆ ಒಪ್ಪಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು. ಹಿಂದೂ ಯುವತಿ ಕರೆದೊಯ್ಯುತ್ತಿದ್ದ ಮುಸ್ಲಿಂ ಯುವಕನಿಗೆ ಎಚ್ಚರಿಕೆ ನೀಡಿ, ವಾಪಸ್ಸು ಕಳಿಸಿದ್ದಾರೆ. ನಾಲ್ಕು ದಿನವಾದರೂ ಯಾವುದೇ ಪ್ರಕರಣ ದಾಖಲಾಗಿಲ್ಲ.
- ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
- ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
- MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ
- HDK – ನಿಖಿಲ್ ವಿರುದ್ಧ ಎಡಿಜಿಪಿ ಚಂದ್ರಶೇಖರ್ ದೂರು ದಾಖಲು
- ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಪ್ರಚಾರದಲ್ಲಿ ಸಕ್ರಿಯ
More Stories
ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
HDK – ನಿಖಿಲ್ ವಿರುದ್ಧ ಎಡಿಜಿಪಿ ಚಂದ್ರಶೇಖರ್ ದೂರು ದಾಖಲು
ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು : ಬೆಂಕಿ ಹೊತ್ತಿಕೊಂಡು ಚಾಲಕ ಸಜೀವದಹನ