ಮಂಡ್ಯದಲ್ಲಿ ಸ್ಕೂಟರ್​​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಮೇಲೆರಿದ ಕಾರು- ಬೈಕ್​ ಸವಾರ ಸಾವು

Team Newsnap
1 Min Read
Bike and car accident in Mandya : Biker dead ಮಂಡ್ಯದಲ್ಲಿ ಸ್ಕೂಟರ್​​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಮೇಲೆರಿದ ಕಾರು- ಬೈಕ್​ ಸವಾರ ಸಾವು

ಕಾರು, ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಓರ್ವ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಬಿಸಿಲುಮಾರಮ್ಮ ಬಳಿಯ ಮಂಡ್ಯ ಮೈಸೂರು – ಬೆಂಗಳೂರು ಹೆದ್ದಾರಿಯ ದೇವಸ್ಥಾನದ ಬಳಿ ನಡೆದಿದೆ.

ಈ ಘಟನೆಯಲ್ಲಿ ಮೃತ ದುರ್ದೈವಿ ಸತೀಶ್ (40)ಎಂಬುವವರು ಸಿದ್ದಯ್ಯನಕೊಪ್ಪಲು ಗ್ರಾಮದ ನಿವಾಸಿ. ತೆಂಗಿನ ಕಾಯಿ ವ್ಯಾಪಾರ ಮುಗಿಸಿಕೊಂಡು ತೆರಳುತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಆದರೆ ಬೈಕ್​​ಗೆ ಕಾರು ಡಿಕ್ಕಿ ಹೊಡೆದ ಬಳಿಕ ಬಿಸಿಲುಮಾರಮ್ಮ ದೇಗುಲದ ಕಾಂಪೌಂಡ್​​​ಗೆ ಏಕಾಏಕಿ ನುಗ್ಗಿದೆ. ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕ ‘ದೇವರ ಮೊಸಳೆ’ ಬಬಿಯಾ ಇನ್ನಿಲ್ಲ

ಸದ್ಯ ಕಾರಿನಲ್ಲಿದ್ದವರು ಹಾಗೂ ದೇವಸ್ಥಾನದ ಬಳಿ ಇದ್ದ ಭಕ್ತರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅಲ್ಲೇ ಇದ್ದ ಸ್ಥಳೀಯರು ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಘಟನಾ ಸ್ಥಳಕ್ಕೆ ಪೊಲೀಸ್​​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ಕುರಿತು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment