ಬಿಹಾರ ವಿಧಾನಸಭೆ; 194 ಶಾಸಕರು ಕೋಟ್ಯಾಧಿಪತಿಗಳು, 163 ಶಾಸಕರ ಕ್ರಿಮಿನಲ್ ಪ್ರಕರಣ ಬಾಕಿ

Team Newsnap
2 Min Read

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಶಾಸಕರ ಪೈಕಿ 194 ಜನ ಕೋಟ್ಯಾಧಿಪತಿಗಳು. 163 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ.

2015 ರ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗಮನಿಸಿದ ಪ್ರಕಾರ 243 ಶಾಸಕರಲ್ಲಿ 142 (ಶೇ.58) ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ.

123 (ಶೇಕಡಾ 51) ವಿಜೇತ ಅಭ್ಯರ್ಥಿಗಳು ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಾಚಾರ ಪ್ರಕರಣಗಳು ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ.

ಗೆದ್ದಿರುವ 19 ಶಾಸಕರುಗಳು ತಮ್ಮ ವಿರುದ್ಧ ಕೊಲೆ (ಐಪಿಸಿ ಸೆಕ್ಷನ್ -302) ಪ್ರಕರಣಗಳನ್ನು ಘೋಷಿಸಿದ್ದಾರೆ. ಬಿಹಾರದ 31 ವಿಜೇತ ಶಾಸಕರುಗಳು ಕೊಲೆ ಯತ್ನ ಪ್ರಕರಣಗಳನ್ನು ಘೋಷಿಸಿದ್ದರೆ (ಐಪಿಸಿ ಸೆಕ್ಷನ್ -307), 8 ವಿಜೇತ ಅಭ್ಯರ್ಥಿಗಳು ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಚುನಾವಣಾ ಆಯೋಗಕ್ಕೆ ಘೋಷಿಸಿದ್ದಾರೆ.

ಆರ್‌ಜೆಡಿ 54 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಮುಖ ಪಕ್ಷಗಳಲ್ಲಿ, ಆರ್‌ಜೆಡಿಯಿಂದ ಗೆದ್ದ 74 ಅಭ್ಯರ್ಥಿಗಳಲ್ಲಿ 54 (ಶೇ.73), ಬಿಜೆಪಿಯಿಂದ ಗೆದ್ದ 73 ಅಭ್ಯರ್ಥಿಗಳಲ್ಲಿ 47 (ಶೇ.64), ಜೆಡಿಯುನಿಂದ ಗೆದ್ದ 43 ಅಭ್ಯರ್ಥಿಗಳಲ್ಲಿ 20 (ಶೇ.47), ಕಾಂಗ್ರೆಸ್ ನಿಂದ ಗೆದ್ದ 19 ಅಭ್ಯರ್ಥಿಗಳಲ್ಲಿ 16 (ಶೇ.84), ಸಿಪಿಐ (ಎಂಎಲ್)(ಎಲ್) ನಿಂದ ಗೆದ್ದ 12 ಅಭ್ಯರ್ಥಿಗಳಲ್ಲಿ 10 (ಶೇ.83) ಮತ್ತು ಎಐಎಂಐಎಂನಿಂದ ಗೆದ್ದ 5 ಅಭ್ಯರ್ಥಿಗಳಲ್ಲಿ 5 (ಶೇ.100) ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಅಫಿಡವಿಟ್ ಗಳಲ್ಲಿ ಘೋಷಿಸಿದ್ದಾರೆ.

ಆರ್‌ಜೆಡಿಯಿಂದ ಗೆದ್ದ 74 ಅಭ್ಯರ್ಥಿಗಳಲ್ಲಿ 44 (ಶೇ.60), ಬಿಜೆಪಿಯಿಂದ ಗೆದ್ದ 73 ಅಭ್ಯರ್ಥಿಗಳಲ್ಲಿ 35 (ಶೇ.48), ಜೆಡಿಯುನಿಂದ ಗೆದ್ದ 43 ಅಭ್ಯರ್ಥಿಗಳಲ್ಲಿ 11 (ಶೇ.26), ಕಾಂಗ್ರೆಸ್ ನಿಂದ ಗೆದ್ದ 19 ಅಭ್ಯರ್ಥಿಗಳಲ್ಲಿ 11 (ಶೇ.58), ಸಿಪಿಐ (ಎಂಎಲ್) (ಎಲ್) ನಿಂದ ಗೆದ್ದ 12 ಅಭ್ಯರ್ಥಿಗಳಲ್ಲಿ 8 (ಶೇ.67) ಮತ್ತು ಎಐಎಂಐಎಂನಿಂದ ಗೆದ್ದ 5 ಅಭ್ಯರ್ಥಿಗಳಲ್ಲಿ 5 (ಶೇ.100) ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ತಮ್ಮ ಅಫಿಡವಿಟ್‌ಗಳಲ್ಲಿ ಘೋಷಿಸಿದ್ದಾರೆ.

241 ಶಾಸಕರುಗಳಲ್ಲಿ 194 ಜನ ಕೋಟ್ಯಾಧಿಪತಿಗಳು

241 ಶಾಸಕರುಗಳಲ್ಲಿ 194 (ಶೇ.81) ಜನ ಕೋಟ್ಯಾಧಿಪತಿಗಳಾಗಿದ್ದರೆ. 2015 ರ ಬಿಹಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ವಿಶ್ಲೇಷಿಸಿದ 243 ಶಾಸಕರಲ್ಲಿ 162 (ಶೇಕ.67) ಶಾಸಕರು ಕೋಟ್ಯಾಧಿಪತಿಗಳಾಗಿದ್ದರು.

ಪ್ರಮುಖ ಪಕ್ಷಗಳಾದ ಬಿಜೆಪಿಯಿಂದ 73 ಶಾಸಕರ ಪೈಕಿ 65 (ಶೇ.89), ಆರ್‌ಜೆಡಿಯ 74 ಶಾಸಕರ ಪೈಕಿ 64 (ಶೇ.87), ಜೆಡಿಯುನ 43 ಶಾಸಕರ ಪೈಕಿ 38 (ಶೇ.88) ಮತ್ತು ಕಾಂಗ್ರೆಸ್ ನ 19 ಶಾಸಕರ ಪೈಕಿ 14 (ಶೇ.74) ವಿಜೇತ ಅಭ್ಯರ್ಥಿಗಳು ಕೋಟ್ಯಾಧೀಶ್ವರರಾಗಿದ್ದಾರೆ.

Share This Article
Leave a comment