ಸ್ಪರ್ಧಿ ವರ್ತೂರು ಸಂತೋಷ್ ಎನ್ನುವವರನ್ನು ಬಿಗ್ ಬಾಸ್ ಮನೆಯಿಂದ ಹೊರ ಕರೆತಂದ ರಾಮೋಹಳ್ಳಿ ಅರಣ್ಯಾಧಿಕಾರಿಗಳು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ .
ಸಂತೋಷ್ ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಅನ್ನು ಹಾಕಿಕೊಂಡಿದ್ದರು. ಈ ಕುರಿತು ಶರತ್ ಎನ್ನುವವರು ದೂರು ನೀಡಿದ್ದರು.
ಈ ಹಿನ್ನೆಲೆ ವರ್ತೂರು ಸಂತೋಷ್ ನನ್ನ ಬಂಧಿಸಿ, ಸದ್ಯ ಅರಣ್ಯಾಧಿಕಾರಿಗಳಿಂದ ಸಂತೋಷ್ ಅವರ ವಿಚಾರಣೆ ನಡೆಯುತ್ತಿದೆ.
ದೂರುದಾರ ಶರತ್ ಮಾಧ್ಯಮಗಳ ಜೊತೆ ಮಾತನಾಡಿ, ‘ಎರಡು ದಿನದ ಹಿಂದೆ ನಾನು ದೂರು ಕೊಟ್ಟಿದ್ದೆ. ಹುಲಿಯುಗುರು ಇರುವ ಪದಕವನ್ನು ಅವರು ಧರಿಸಿದ್ದರು.
ಇದು ವನ್ಯಜೀವಿ ಕಾಯ್ದೆಯ ಪ್ರಕಾರ ತಪ್ಪು. ಸೆಲೆಬ್ರಿಟಿಗಳು ರೂಲ್ಸ್ ಪಾಲನೆ ಮಾಡಬೇಕು. ಈ ರೀತಿ ಹುಲಿಯುಗುರಿನ ಪದಕ ಧರಿಸೋದು ತಪ್ಪು. ಅದು ಒರಿಜಿನಲ್ಲೋ ಅಥವಾ ಡೂಪ್ಲಿಕೇಟ್ ಅನ್ನೋದು ಫಾರೆನ್ಸಿಕ್ ನವರು ಡಿಸೈಡ್ ಮಾಡಬೇಕು’ ಎಂದರು.ಮುತ್ತಗೆರೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿ : ವಾಹನ ಸಂಪೂರ್ಣ ಭಸ್ಮ | ವೀಡಿಯೊ ಇಲ್ಲಿದೆ
ಸೋಮವಾರ ಬೆಳಗ್ಗೆ ರಾಮನಗರ ಪೊಲೀಸರು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದರು. ಬಿಗ್ ಬಾಸ್ ತಂಡಕ್ಕೆ ವಿವರಗಳನ್ನು ತಿಳಿಸಿದ ಸಂತೋಷ್ ಅವರನ್ನು ವಶಕ್ಕೆ ಪಡೆದುಕೊಂಡರು. ನಂತರ ಅವರನ್ನು ಬಿಗ್ ಬಾಸ್ ಮನೆಯಿಂದ ಕರೆದುಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು