ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಪ್ತ ಉಮೇಶ್ ಸೇರಿದಂತೆ ನೀರಾವರಿ, ಲೋಕೋಪಯೋಗಿ ಇಲಾಖೆಯ ಕ್ಲಾಸ್ 1 ಕಂಟ್ರಾಕ್ಟರ್ ಗಳಾದ ಉಪ್ಪಾರ, ಅರವಿಂದ್, ಸೋಮಶೇಖರ್ ಮೇಲೆ ಈ ತಿಂಗಳ ಆರಂಭದಲ್ಲಿ ಐಟಿ ನಡೆಸಿದ್ದ ರೇಡ್‍ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಐಟಿ ರೇಡ್ ವೇಳೆ ಸಿಕ್ಕಿದ್ದ 750 ಕೋಟಿ ರೂಪಾಯಿ ಮೌಲ್ಯದ ಸಂಪತ್ತಿನಲ್ಲಿ 150 ಕೋಟಿಯಷ್ಟೇ ಸಕ್ರಮ. ಉಳಿದ 600 ಕೋಟಿ ಬೇನಾಮಿಯಾಗಿರುವುದು ಖಚಿತವಾಗಿದೆ.
ದಾಳಿ ವೇಳೆ ಪತ್ತೆಯಾಗಿದ್ದ 750 ಕೋಟಿ ಅಕ್ರಮ ಆಸ್ತಿ ಕುರಿತು ತನಿಖೆಯ ವೇಳೆ 30ಕ್ಕೂ ಹೆಚ್ಚು ಗುತ್ತಿಗೆದಾರರನ್ನು ಕರೆಸಿ ಐಟಿ ಇಲಾಖೆ ಮತ್ತೆ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ 600 ಕೋಟಿಗೆ ಲೆಕ್ಕ ತೋರಿಸುವಲ್ಲಿ ಗುತ್ತಿಗೆದಾರರು ವಿಫಲರಾಗಿದ್ದಾರೆ. ಕೇವಲ 150 ಕೋಟಿಗೆ ದಾಖಲೆ ಒದಗಿಸುವಲ್ಲಿ ಗುತ್ತಿಗೆದಾರರು ಸಫಲರಾಗಿದ್ದಾರೆ.
ಶೀಘ್ರವೇ ಆಸ್ತಿ ಅಸೆಸ್ಮೆಂಟ್ ಟೀಂಗೆ ತನಿಖಾ ತಂಡದ ವರದಿ ಸಲ್ಲಿಕೆ ಮಾಡಿದ್ದು, ಮತ್ತೊಮ್ಮೆ ಗುತ್ತಿಗೆದಾರರನ್ನು ವಿಚಾರಣೆಗೆ ಒಳಪಡಿಸಲಿದೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಈ 600 ಕೋಟಿ ಅಕ್ರಮ ಸಂಪತ್ತು ಯಾರದು ಅಂತ ತನಿಖೆ ಚುರುಕುಗೊಳಿಸಲು ಮುಂದಾಗಿದೆ.
ಈ ಮಧ್ಯೆ ಯಡಿಯೂರಪ್ಪ ಮಾತ್ರ ಉಮೇಶ್ ಮೇಲಿನ ಐಟಿ ರೇಡ್‍ಗೂ ನನಗೂ ಸಂಬಂಧ ಇಲ್ಲ ಅಂದಿದ್ದಾರೆ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ