November 15, 2024

Newsnap Kannada

The World at your finger tips!

rukmini madegowda

ಬಿಗ್ ಟ್ವಿಸ್ಟ್: ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಮೇಯರ್, ಕಾಂಗ್ರೆಸ್ ಗೆ ಉಪ ಮೇಯರ್ ಪಟ್ಟ?

Spread the love

ಮೈಸೂರು ಮಹಾನಗರ ಪಾಲಿಕೆ ಮೇಯರ್ ಹುದ್ದೆ ಜೆಡಿಎಸ್ ಪಾಲಾಗಿದೆ. ಕಾಂಗ್ರೆಸ್ ಉಪಮೇಯರ್ ಪಟ್ಟವನ್ನು ಅಲಂಕರಿಸಲಿದೆ

ಮೇಯರ್ ಸ್ಥಾನ ಜೆಡಿಎಸ್ ನ ರುಕ್ಮಿಣಿ ಮಾದೇಗೌಡ 43 ಮತಗಳಿಂದ ಗೆದ್ದಿದ್ದಾರೆ.ಹಾಗೂ ಉಪ ಮೇಯರ್ ಆಗಿ ಕಾಂಗ್ರೆಸ್ ನ ಅನ್ವರ್ ಬೇಗ್ ಆಯ್ಕೆ ಬಹುತೇಕ ಖಚಿತವಾಗಿದೆ.

ಮೈತ್ರಿ ಧರ್ಮ ಉಲ್ಲಂಘಿಸಿದ ಜೆಡಿಎಸ್ ಮತ್ತೆ ತಾನೇ ಮೇಯರ್ ಪಟ್ಟ ಪಡೆದುಕೊಂಡಿದೆ. ಕೊನೆಯ ಕ್ಷಣದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಚ್ಛರಿಯ ರೀತಿಯಲ್ಲಿ ಮುಂದುವರಿದಿದೆ.

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮುರಿದು ಬಿದ್ದಿದೆ ಎನ್ನುವ ದಟ್ಟ ಸುದ್ದಿ ಹರಡಿತ್ತು. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಆರೋಪ -ಪ್ರತ್ಯಾರೋಪ ಮಾಡಿಕೊಂಡಿದ್ದರು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮೇಯರ್ ಪಟ್ಟ ತನ್ನದೆಂದು ಬಿಜೆಪಿ ನಿರೀಕ್ಷಿಸಿತ್ತು. ಆದರೆ ಜೆಡಿಎಸ್ ತನಗೆ ಬೆಂಬಲಿಸಬಹುದೆನ್ನುವ ನಿರೀಕ್ಷೆ ಬಿಜೆಪಿ ಪಾಳಯದಲ್ಲಿತ್ತು. ಆದರೆ ಮತ್ತೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿಯೇ ಮುಂದುವರಿದಂತಾಗಿದೆ.

ಆದರೆ ಒಡಂಬಡಿಕೆ ಪ್ರಕಾರ ಕಾಂಗ್ರೆಸ್ ಗೆ ಈ ಬಾರಿ ಮೇಯರ್ ಪಟ್ಟ ಕೊಡಬೇಕಿತ್ತು. ಆದರೆ ಜೆಡಿಎಸ್ ಮೈತ್ರಿ ಒಪ್ಪಂದ ಮುರಿದು ತಾನೇ ಮೇಯರ್ ಪಟ್ಟ ಪಡೆದುಕೊಂಡಿದೆ.

ಕರ್ನಾಟಕದಲ್ಲಿ ಈ ಹಿಂದೆ ಜೆಡಿಎಸ್ – ಬಿಜೆಪಿ 20:20 ಮೈತ್ರಿಯಾದಂತೆ ಇಲ್ಲೂ ಜೆಡಿಎಸ್ ವಚನಭ್ರಷ್ಟ ಮಾಡಿದೆ. ಆದರೆ ಕಾಂಗ್ರೆಸ್ ಜೆಡಿಎಸ್ ಗೆ ಶರಣಾಗಿದೆ.

ಈ ಹಿಂದೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎನ್ನಲಾಗಿತ್ತು.

ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಹೇಳಲಾಗಿತ್ತು. ನಿನ್ನೆ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಕಾ ಎನ್ನಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷವನ್ನು ಬಿಟ್ಟು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿತ್ತು.

Copyright © All rights reserved Newsnap | Newsever by AF themes.
error: Content is protected !!